ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಕರಣ ವ್ಯವಸ್ಥೆಗೆ ಕೆಟ್ಟ ಹೆಸರನ್ನು ತಂದಿದ್ದು, ಇತರೆ ಬ್ಯಾಂಕ್ ಗಳ ಕಣ್ಣು ತೆರೆಸಿದೆ ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಶುಕ್ರವಾರ ಹೇಳಿದ್ದಾರೆ.
ಇನ್ನ್ಟಿಟ್ಯೂಟ್ ಆಫ್ ಕಾಸ್ಟ್ ಆ್ಯಂಡ್ ವರ್ಕ್ಸ್ ಅಕೌಂಟ್ಸ್ ಆಫ್ ಇಂಡಿಯಾ (ಐಸಿಡಬ್ಲ್ಯೂಎ) ಆಯೋಜಿಸಿದ್ದ 58ನೇ ರಾಷ್ಟ್ರೀಯ ವೆಚ್ಚದ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ನಡೆದ ವಂಚನೆ ಪ್ರಕರಣ, ನಮ್ಮೆಲ್ಲರ ಕಣ್ಣು ತೆರೆಸಿದೆ. ವ್ಯವಸ್ಥೆಯಲ್ಲಿ ವಿಫಲತೆಗಳು ಕಂಡು ಬಂದಿದೆ. ಕೆಲ ವ್ಯಕ್ತಿಗಳು ಇದೇ ಸಂದರ್ಭದಲ್ಲಿ ನಮಗೆ ಹಾಗೂ ವ್ಯವಸ್ಥೆಗೆ ಕೆಟ್ಟ ಹೆಸರನ್ನು ತಂದಿದ್ದಾರೆಂದು ಹೇಳಿದ್ದಾರೆ. '
ದೇಶದಲ್ಲಿ ಹೆಚ್ಚಿನ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನೈತಿಕ ಸಾಂಸ್ಥಿಕ ಆಡಳಿತ ಅವಶ್ಯಕತೆಯಿದೆ ಎಂದು ಇದೇ ವೇಳೆ ನಾಯ್ಡು ಅವರು ತಿಳಿಸಿದ್ದಾರೆ.