ರಾಹುಲ್ ಗಾಂಧಿ 
ದೇಶ

'ಗಬ್ಬರ್ ಸಿಂಗ್ ತೆರಿಗೆ 'ಯನ್ನ ಜಗತ್ತೇ ಹೊಗಳುತ್ತಿದೆ - ಮೋದಿಗೆ ರಾಹುಲ್ ಟಾಂಗ್

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಗಬ್ಬರ್ ಸಿಂಗ್ ತೆರಿಗೆಯನ್ನು ಇಡೀ ಜಗತ್ತೇ ಹೊಗುಳುತ್ತಿದೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರಮೋದಿಗೆ ಟಾಂಗ್ ನೀಡಿದ್ದಾರೆ.

ನವದೆಹಲಿ :ಕೇಂದ್ರಸರ್ಕಾರದ ಮಹತ್ವಾಕಾಂಕ್ಷೆಯ ಜಿಎಸ್ ಟಿ ತೆರಿಗೆ ವಿಶ್ವದಲ್ಲಿಯೇ ಅತ್ಯಂತ ದುಬಾರಿಯಾದ ಹಾಗೂ ಸಂಕೀರ್ಣವಾದ ತೆರಿಗೆ ಎಂದು ಇತ್ತೀಚಿಗೆ ವಿಶ್ವ ಬ್ಯಾಂಕ್ ವರದಿ ನೀಡಿತ್ತು. ಈ ವರದಿಗೆ ಪ್ರತಿಕ್ರಿಯಿಸಿರುವ  ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಗಬ್ಬರ್ ಸಿಂಗ್ ತೆರಿಗೆಯನ್ನು ಇಡೀ ಜಗತ್ತೇ ಹೊಗುಳುತ್ತಿದೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರಮೋದಿಗೆ ಟಾಂಗ್ ನೀಡಿದ್ದಾರೆ.

ಮೋದಿ ಜೀ. ಗಬ್ಬರ್ ಸಿಂಗ್ ತೆರಿಗೆಯನ್ನ ಇಡೀ ಜಗತ್ತೇ ಹೊಗಳುತ್ತಿದೆ. ವಿಶ್ವದಲ್ಲಿಯೇ ಎರಡನೇ ಅತಿ ದುಬಾರಿ ಹಾಗೂ ಸಂಕೀರ್ಣವಾದದ್ದು ಎಂದು ವಿಶ್ವ ಬ್ಯಾಂಕ್ ಹೇಳಿದೆ ಎಂದು ರಾಹುಲ್ ಗಾಂಧಿ ಇಂದು ಟ್ವೀಟ್ ಮಾಡಿದ್ದಾರೆ.



ತೆರಿಗೆ ಪ್ರಮಾಣ ಮಾತ್ರವಲ್ಲ, ತೆರಿಗೆ ವಿಧಾನದಲ್ಲೂ ಜಿಎಸ್ ಟಿ ತೆರಿಗೆ ಪದ್ಧತಿ ವಿಶ್ವದಲ್ಲಿಯೇ ಅತ್ಯಂತ ಸಂಕೀರ್ಣವಾದದ್ದು ,ಸರಕು ಮತ್ತು ಸೇವೆ ವ್ಯಾಪಾರದ ಮೇಲೆ ಶೇ.28 ರಷ್ಟು ತೆರಿಗೆ ವಿಧಿಸುವ ಮಾದರಿ 115 ದೇಶದಲ್ಲಿಯೇ ಅತಿ ದುಬಾರಿಯಾಗಿದೆ ಎಂದು ವಿಶ್ವಬ್ಯಾಂಕು ದ್ವಿವಾರ್ಷಿಕ ಭಾರತ ಅಭಿವೃದ್ಧಿ ವರದಿಯಲ್ಲಿ ತಿಳಿಸಲಾಗಿದೆ.

 ಭಾರತದಲ್ಲಿ ಪ್ರಸ್ತುತ ಶೇ.5, 12, 18, ಹಾಗೂ 28ರ ಮಾದರಿಯಲ್ಲಿ ತೆರಿಗೆ ದರ ವಿಧಿಸಲಾಗುತ್ತಿದೆ. ಇವುಗಳನ್ನು ಹೊರತುಪಡಿಸಿ ಕೆಲ ವಸ್ತುಗಳ ಮೇಲೆ ಶೂನ್ಯ ತೆರಿಗೆ , ಚಿನ್ನದ ಮೇಲೆ ಶೇ.3ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಆದಾಗ್ಯೂ, ಪೆಟ್ರೋಲಿಯಂ ಉತ್ಪನ್ನ, ಇಂಧನ,ಮತ್ತು ರಿಯಲ್ ಎಸ್ಟೇಟ್ ನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

ಜಿಎಸ್ ಟಿ ತೆರಿಗೆ ಪ್ರಧಾನಮಂತ್ರಿ ನರೇಂದ್ರಮೋ ಅವರ ಮಹತ್ವಕಾಂಕ್ಷೆಯ ವಿತ್ತಿಯ ಯೋಜನೆಯಾಗಿದ್ದು, 2017 ಜುಲೈ ತಿಂಗಳಿನಿಂದ ಅನುಷ್ಠಾನಕ್ಕೆ ತರಲಾಗಿದೆ. ಈ ನೀತಿ ಸಮರ್ಪಕವಾಗಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸುತ್ತಾ ಬಂದಿದ್ದಾರೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!

ಬರ ಎಫೆಕ್ಟ್: ರೈತರ ನೆರವಿಗೆ ಧಾವಿಸಿದ ಸರ್ಕಾರ; 1,250 ಕೋಟಿ ರೂ. ಮೊದಲ ಕಂತು ಬಿಡುಗಡೆ..!