ಸುಷ್ಮಾ ಸ್ವರಾಜ್ ಪತ್ರಿಕಾಗೋಷ್ಠಿ
ನವದೆಹಲಿ: ಇಸೀಸ್ ಉಗ್ರರ ಸೆರೆಯಲ್ಲಿ ಸಿಲುಕಿದ್ದ 39 ಭಾರತೀಯರು ಮೃತಪಟ್ಟಿರುವುದನ್ನು ಕುಟುಂಬ ಸದಸ್ಯರಿಗೆ ತಿಳಿಸದೇ ನೇರವಾಗಿ ಸಂಸತ್ ನಲ್ಲಿ ಘೋಷಣೆ ಮಾಡಿರುವ ಕೇಂದ್ರ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತವಾಗಿದ್ದು, ಪ್ರತಿಕ್ರಿಯೆ ನೀಡಿರುವ ಸುಷ್ಮಾ ಸ್ವರಾಜ್, ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ವಿಷಯವನ್ನು "ರಾಷ್ಟ್ರೀಯ ಪ್ರಾಮುಖ್ಯತೆ" ಎಂದು ಹೇಳಿರುವ ಸುಷ್ಮಾ ಸ್ವರಾಜ್, ಇಸೀಸ್ ಉಗ್ರರ ಸೆರೆಯಲ್ಲಿದ್ದ ಭಾರತೀಯರ ಬಗ್ಗೆ ಮಾಹಿತಿ ದೊರೆತ ತಕ್ಷಣವೇ ಸಂಸತ್ ನ ಉಭಯ ಕಲಾಪಗಳಲ್ಲಿ ಘೋಷಣೆ ಮಾಡುವುದಾಗಿ ಹೇಳಿದ್ದೆ. ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ ಭಾರತ ಸರ್ಕಾರ ವಿವಿಧ ಅಧಿಕೃತ ಮೂಲಗಳಿಂದ ಮಾಹಿತಿ ಸಂಗ್ರಹಿಸುತ್ತಿತ್ತು, ಆ ಮಾಹಿತಿಗಳ ಪ್ರಕಾರ 39 ಭಾರತೀಯರನ್ನು ಹತ್ಯೆ ಮಾಡಲಾಗಿಲ್ಲ ಎಂದೇ ಹೇಳಲಾಗಿತ್ತು. ಆದರೆ ಹತ್ಯೆಯ ಬಗ್ಗೆ ಸಂಸತ್ ಗೆ ತಿಳಿಸುವುದಕ್ಕೂ ಮುನ್ನ ಕುಟುಂಬ ಸದಸ್ಯರಿಗೇಕೆ ಮಾಹಿತಿ ನೀಡಲಾಗಿಲ್ಲ ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ನಿಯಮದಂತೆಯೇ ಮೊದಲು ಸಂಸತ್ ಗೆ ಮೊದಲು ಮಾಹಿತಿ ನೀಡಲಾಗಿದೆ, ಅದು ನನ್ನ ಕರ್ತವ್ಯವಾಗಿತ್ತು ಎಂದು ಸುಷ್ಮಾ ಸ್ವರಾಜ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೆಲವು ಕುಟುಂಬ ಸದಸ್ಯರು ಆಕ್ರೋಶ ಭರಿತರಾಗಿ ಮಾತನಾಡಿದ್ದಾರೆ, ಅವರ ಆಕ್ರೋಶ ಸ್ವಾಭಾವಿಕ ಆದರೆ ನಾನು ಯಾವುದೇ ಹಂತದಲ್ಲಿಯೂ ಹತ್ಯೆಗೀಡಾದ ಸದಸ್ಯರ ಕುಟುಂಬದಿಂದ ಏನನ್ನೂ ಮರೆಮಾಚಿಲ್ಲ, ನಮಗೆ ಅಧಿಕೃತ ಮಾಹಿತಿ ಸಿಗದೇ ಘೋಷಣೆ ಸಾಧ್ಯವಿರಲಿಲ್ಲ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics