ನವದೆಹಲಿ: ಗ್ರ್ಯಾಜ್ಯುಟಿ ಪಾವತಿ (ತಿದ್ದುಪಡಿ) ಮಸೂದೆಗೆ ರಾಜ್ಯಸಭೆ ಅನುಮೋದನೆ ನೀಡಿದೆ. ನಂತರ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಗ್ರ್ಯಾಜ್ಯುಟಿ ಪಾವತಿ ಕಾಯ್ದೆಯಡಿ ನೌಕರರಿಗೆ ಇನ್ನು ಮುಂದೆ 10 ಲಕ್ಷದಿಂದ 20 ಲಕ್ಷದವರೆಗೆ ತೆರಿಗೆ ವಿನಾಯ್ತಿ ದೊರೆಯಲಿದೆ.
ಫ್ಯಾಕ್ಟರಿಗಳು, ಗಣಿಗಾರಿಕೆ, ತೈಲನಿಕ್ಷೇಪ, ಪ್ಲಾಂಟೇಷನ್, ಬಂದರು, ರೈಲ್ವೆ ಕಂಪೆನಿಗಳು, ಅಂಗಡಿಗಳು ಅಥವಾ ಇತರ ಕಂಪೆನಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ಗ್ರ್ಯಾಜ್ಯುಟಿ ನೀಡುವ ಗ್ರ್ಯಾಜ್ಯುಟಿ ಪಾವತಿ ಕಾಯ್ದೆ 1972ನ್ನು ಜಾರಿಗೆ ತರಲಾಯಿತು.
10 ಅಥವಾ ಅದಕ್ಕಿಂತ ಹೆಚ್ಚ ನೌಕರರು ಕೆಲಸ ಮಾಡುವ ಸ್ಥಳಗಳಲ್ಲಿ ಕನಿಷ್ಠ 5 ವರ್ಷ ಕೆಲಸ ಮಾಡಿದ ನೌಕರರಿಗೆ ಗ್ರ್ಯಾಜ್ಯುಟಿ ಅನ್ವಯವಾಗುತ್ತದೆ.