ಆರ್'ಜೆಡಿ ನಾಯಕ ತೇಜಸ್ವಿ ಯಾದವ್
ಪಾಟ್ನ: ಬಿಹಾರ ಭಾಗಲ್ಪುರದಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ರಾಜ್ಯ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಆರ್'ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಗುರುವಾರ ತೀವ್ರವಾಗಿ ಕಿಡಿಕಾರಿದ್ದಾರೆ.
ಬಿಹಾರ ಹಿಂಸಾಚಾರ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಹಿಂಸಾಚಾರ ಪ್ರಕರಣ ಕುರಿತು ಬಿಜೆಪಿಯನ್ನು ದೂಷಿಸುವುದಕ್ಕಿಂತಲೂ ಹೆಚ್ಚಾಗಿ ನಾವು ಬಿಹಾರ ಮುಖ್ಯಮಂತ್ರಿಗಳನ್ನು ದೂಷಿಸಬೇಕು. ಅರಾರಿಯಾ, ಭಾಗಲ್ಪುರ್ ಅಥವಾ ದರ್ಭಾಂಗ ಎಲ್ಲಿಯೇ ಆದರೂ ಹಿಂಸಾಚಾರ ನಡೆದಿದ್ದರೆ, ನಿತೀಶ್ ಕುಮಾರ್ ಅವರೇ ತಪ್ಪಿತಸ್ಥರು. ಏಕೆಂದರೆ ನಿತೀಶ್ ಅವರು ಹೇಡಿತನದ ನಿರ್ಧಾರಗಳನ್ನು ಕೈಗೊಂಡಿದ್ದರು ಎಂದು ಹೇಳಿದ್ದಾರೆ.
ಬಳಿಕ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಗಿರಿರಾಜ್ ಸಿಂಗ್ ಅವರು ದಲಿತರ ಭೂಮಿಯನ್ನು ಕಬಳಿಸಿದ್ದಾರೆ. ಆದರೂ ಅವರ ವಿರುದ್ಧ ಯಾವುದೇ ರೀತಿಯ ಎಫ್ಐಆರ್ ದಾಖಲಾಗಿಲ್ಲ. ಹಿಂಸಾಚಾರ ಸೃಷ್ಟಿಸುವವರು ಯಾವುದೇ ಭಯವಿಲ್ಲದೆ ಹಗರಣಗಳಲ್ಲೂ ಭಾಗಿಯಾಗುತ್ತಾರೆ. ನಿತೀಶ್ ಅವರು ಹೇಡಿತನದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics