ನವಿಮುಂಬೈ: ತಂದೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆ ಹಿನ್ನಲೆ ತನ್ನ 16 ವರ್ಷದ ಮಗಳ ಕತ್ತು ಹಿಸುಕಿ ತಾಯಿ ಹತ್ಯೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಮಾರ್ಚ್ 4ರಂದು ಈ ಹತ್ಯೆ ನಡೆದಿದ್ದು ಮರಣೋತ್ತರ ಪರೀಕ್ಷೆಯಲ್ಲಿ ಮೃತಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದ್ದು ಈ ಸಂಬಂಧ ವಿಚಾರಣೆ ನಡೆಸಿದ ಖರ್ಗರ್ ಪೊಲೀಸರು 36 ವರ್ಷದ ಮಹಿಳೆ ಮೃತಳ ತಾಯಿಯನ್ನು ಬಂಧಿಸಿದ್ದಾರೆ.
ಈ ಕುಟುಂಬ ರಾಜಸ್ಥಾನದ ಮೂಲದವರಾಗಿದ್ದು ತಾಯಿ ಗೃಹಿಣಿಯಾಗಿದ್ದು ಆಕೆಯ ಪತಿ ಸಿವಿಲ್ ಕಂಟ್ರಾಕ್ಟರ್ ಆಗಿದ್ದರು. ಘಟನೆ ನಡೆದ ದಿನ ಮಧ್ಯಾಹ್ನನ ಸಂತ್ರಸ್ತೆಯ ತಂದೆ ಮನೆಗೆ ಬಂದಾಗ ಆಕೆ ಮಲಗಿದ್ದಳು. ಆರೋಪಿ ತಾಯಿ ಮಗಳು ಉಪವಾಸ ಮಲಗಿದ್ದಾಳೆ ಎಂದು ಪತಿಗೆ ತಿಳಿಸಿದ್ದು ಸಂಜೆ ವೇಳೆಗೆ ಮಗಳು ಎದ್ದೇಳುತ್ತಿಲ್ಲ ಎಂದು ಕರೆ ಮಾಡಿ ತಿಳಿಸಿದ್ದಳು.
ಸಂಜೆ ತಂದೆ ಮನೆಗೆ ಬಂದು ನೋಡಿದಾಗ ಮಗಳು ಮೃತಪಟ್ಟಿದ್ದು ರಾಜಸ್ಥಾನದಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಮರಣೋತ್ತರ ಪರೀಕ್ಷಾ ವರದಿ ಆಧಾರದಲ್ಲಿ ಪೊಲೀಸರು ಸಂತ್ರಸ್ಥೆಯ ಸಹಪಾಠಿಗಳ ಹೇಳಿಕೆ ಪಡೆದುಕೊಂಡಿದ್ದರು. ತಾಯಿ ಕಳೆದ ಆರು ತಿಂಗಳಿನಿಂದ ಮಗಳಿಗೆ ಥಳಿಸುತ್ತಿದ್ದ ಮತ್ತು ತಂದೆಯ ಜತೆ ಸಂಬಂಧ ಹೊಂದಿರುವ ಶಂಕೆ ವ್ಯಕ್ತಪಡಿಸುತ್ತಿದ್ದ ವಿಷಯ ತಿಳಿದು ಬಂದಿದೆ.
ನಂತರ ಆರೋಪಿ ಮಹಿಳೆಯನ್ನು ವಿಚಾರಿಸಿದಾಗ ಆಕೆ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.