ದೇಶ

ವಿಶ್ವದ ಪ್ರಮುಖ ರಾಷ್ಟ್ರಗಳ ಪೈಕಿ ಅತ್ಯಂತ ಕಡಿಮೆ ಕ್ರಿಮಿನಲ್ ಗಳನ್ನು ಹೊಂದಿರುವ ರಾಷ್ಟ್ರ ಭಾರತ!

Srinivas Rao BV
ನವದೆಹಲಿ: ಅತಿ ಹೆಚ್ಚು ಮಲಿನಗೊಂಡಿರುವ ರಾಷ್ಟ್ರಗಳ ಪಟ್ಟಿ, ಸಂತೋಷದಿಂದ ಇರುವ ರಾಷ್ಟ್ರಗಳ ಪಟ್ಟಿ ಸೇರಿದಂತೆ ಇತ್ತೀಚಿನ ಹಲವು ಸಮೀಕ್ಷೆಗಳಲ್ಲಿ ಭಾರತ ಸಾಕಷ್ಟು ಹಿಂದುಳಿದಿತ್ತು. ಆದರೆ ಈಗ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಭಾರತ ಸಮಾಧಾನಕರ ಫಲಿತಾಂಶ ಪಡೆದಿದ್ದು, ವಿಶ್ವದ ಪ್ರಮುಖ ರಾಷ್ಟ್ರಗಳ ಪೈಕಿ ಅತ್ಯಂತ ಕಡಿಮೆ ಕ್ರಿಮಿನಲ್ ಗಳನ್ನು ಹೊಂದಿರುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 
ಇನ್ಸ್ಟಿ ಟ್ಯೂಟ್ ಆಫ್ ಕ್ರಿಮಿನಲ್ ಪಾಲಿಸಿ ರಿಸರ್ಚ್ ಡಾಟಾದ ಪ್ರಕಾರ ಪ್ರತಿ ಒಂದು ಲಕ್ಷ ಅಮೆರಿಕನ್ನರ ಪೈಕಿ 666 ಜನರು ಜೈಲಿನಲ್ಲಿದ್ದು ವಿಶ್ವದ ಪ್ರಮುಖ ರಾಷ್ಟ್ರಗಳ ಪೈಕಿ ಅತಿ ಹೆಚ್ಚು ಕ್ರಿಮಿನಲ್ ಗಳನ್ನು ಹೊಂದಿರುವ ರಾಷ್ಟ್ರ ಎಂಬ ಕುಖ್ಯಾತಿ ಪಡೆದಿದೆ. 
ಅದೇ ಭಾರತದಲ್ಲಿ ಪ್ರತಿ ಒಂದು ಲಕ್ಷ ಭಾರತೀಯರಿಗೆ ಕೇವಲ 33 ಜನರು ಜೈಲಿನಲಿದ್ದು ವಿಶ್ವದ ಪ್ರಮುಖ ರಾಷ್ಟ್ರಗಳ ಪೈಕಿ ಕಡಿಮೆ ಕ್ರಿಮಿನಲ್ ಗಳಿರುವ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.  ನೆರೆ ರಾಷ್ಟ್ರಗಳಾದ ಪಾಕಿಸ್ತಾನ, ಚೀನಾ, ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶಕ್ಕಿಂತ ಭಾರತ ಕಡಿಮೆ ಅಪರಾಧಿಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ.  
ಭಾರತಕ್ಕೆ ಹೋಲಿಕೆ ಮಾಡಿದರೆ ಪಾಕಿಸ್ತಾನದಲ್ಲಿ ಪ್ರತಿ ಒಂದು ಲಕ್ಷ ಪಾಕಿಸಾನಿಯರ ಪೈಕಿ 44 ಜನರರು ಜೈಲಿನಲ್ಲಿದ್ದಾರೆ ನೇಪಾಳದಲ್ಲಿ 65,  ಶ್ರೀಲಂಕಾದಲ್ಲಿ 78, ಬಾಂಗ್ಲಾದೇಶದಲ್ಲಿ 48, ಚೀನಾದಲ್ಲಿ 118 ಜನರಿದ್ದಾರೆ ಎಂದು ತಿಳಿದುಬಂದಿದೆ.
ಅಮೆರಿಕಾದಲ್ಲಿ  2,145,100, ಬಂಧಿತರಿದ್ದು, ಚೀನಾದಲ್ಲಿ 1,649,804, ಬ್ರೆಜಿಲ್ ನಲ್ಲಿ 672,722, ಭಾರತದಲ್ಲಿ 419,623 ಬಂಧಿತರಿದ್ದು ಈ ಪೈಕಿ ಭಾರತದಲ್ಲಿರುವ ಬಂಧಿತರಲ್ಲಿ ಹೆಚ್ಚಿನ ಮಂದಿ ಇನ್ನೂ ಅಪರಾಧಿಗಳೆಂಬುದು ಸಾಬೀತಾಗದೇ ವಿಚಾರಣೆಯನ್ನಷ್ಟೇ ಎದುರಿಸುತ್ತಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ. 
SCROLL FOR NEXT