ಬಾಲಿವುಟ್ ನಟ ಫಾರುಖ್ ಶೇಖ್ 70ನೇ ಜನ್ಮದಿನಕ್ಕೆ ಗೌರವ ಸಲ್ಲಿಸಿದ ಗೂಗಲ್ ಡೂಡಲ್
ನವದೆಹಲಿ: ಖ್ಯಾತ ಬಾಲಿವುಡ ನಟ ಫಾರುಖ್ ಶೇಖ್ ಅವರ 70ನೇ ಜನ್ಮದಿನದ ಪ್ರಯುಕ್ತ ಗೂಗಲ್ ವಿಶೇಷ ಡೂಡಲ್ ಮೂಲಕ ಭಾನುವಾರ ಗೌರವ ಸಲ್ಲಿಸಿದೆ.
1948ರ ಮಾರ್ಚ್ 25ರಂದು ಜನಿಸಿದ್ದ ಫಾರುಖ್ ಶೇಕ್ ಅವರು ಬಾಲಿವುಡ್ ಚಿತ್ರಕ್ಕೆ ಸುಮಾರು 45 ವರ್ಷಗಳ ಕಾಲ ಅವಿರತ ಸೇವೆ ಸಲ್ಲಿಸಿದ ಬಾಲಿವುಡ್ ಮನೆಗೆ ಆರದ ಬೆಳಕಾಗಿದ್ದಾರೆ. 2013ರ ಡಿ.27 ರಂದು ಫಾರುಖ್ ಅವರು ಅಕಾಲಿಕ ನಿಧನ ಹೊಂದಿದ್ದರು.
1973ರಲ್ಲಿ ತೆರೆಕಂಡ ಎಂ.ಎಸ್. ಸತ್ಯು ಅವರ ಗರಂ ಹವಾ ಫಾರುಖ್ ಅವರು ನಟಿಸಿದ ಮೊದಲ ಚಿತ್ರವಾಗಿತ್ತು. ಇದರೊಂದಿಗೆ ಅವರ ನಟನಾ ಕೌಶಲ್ಯಕ್ಕೆ ವ್ಯಾಪಕ ಮನ್ನಣೆ ದೊರೆಯಿತು.
ಸತ್ಯಜಿತ್ ರೇ ಅವರ ಶತ್ರಾಂಜ್ ಕೆ ಖಿಲಾಡಿ, ಗಮನ್, ಚಶ್ಮೆ ಬಹದ್ದೂರ್, ಉಮರಾವ್ ಜಾನ್, ಬಜಾರ್ ಮೊದಲಾದ ಚಿತ್ರಗಳಲ್ಲಿ ಶಾರುಕ್ ಅವರು ತಮ್ಮ ಅದ್ಭುತ ನಟನೆಯ ಮೂಲಕ ಬಾಲಿವುಡ್ ಮನೆಯಲ್ಲಿ ಆದರ್ಶ ವ್ಯಕ್ತಿಯಾಗಿ ಶೋಭಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics