ದೇಶ

ಪ್ಯಾಲೆಸ್ತೈನ್ ನಿರಾಶ್ರಿತರಿಗೆ ಭಾರತದ ನೆರವು ಹೆಚ್ಚಳ

Raghavendra Adiga
ನವದೆಹಲಿ: ಪ್ಯಾಲೆಸ್ತೈನ್ ನಿರಾಶ್ರಿತರಿಗೆ ಭಾರತ ನೀಡುವ ವಾರ್ಷಿಕ ನೆರವಿನ ಪ್ರಮಾಣವನ್ನು ಹೆಚ್ಚಳ ಮಾಡಿರುವುದಾಗಿ ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯ  ಬುಧವಾರ ಹೇಳಿದೆ.
ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ ಫಾರ್ ಪ್ಯಾಲೆಸ್ಟೈನ್ ರೆಫ್ಯೂಜೀಸ್ ಇನ್ ದಿ ನಾರ್ಚ್ ಈಸ್ಟ್ (ಯುಎನ್ಆರ್ಡಬ್ಲ್ಯೂಎ) ಗೆ ಬಾರತವು ಇದುವರೆವಿಗೆ ವಾರ್ಷಿಕ 1.5 ಮಿಲಿಯನ್ ಡಾಲರ್ ನೀಡುತ್ತಿತ್ತು ಇನ್ನು 2018-19ರಿಂದ ಮೂರು ವರ್ಷಗಳವರೆವಿಗೆ ಈ ಮೊತ್ತವನ್ನು 5 ಮಿಲಿಯನ್ ಡಾಲರ್ ಗೆ ಹೆಚ್ಚಳ ಮಾಡಿರುವುದಾಗಿ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಯುಎನ್ಆರ್ಡಬ್ಲ್ಯೂಎ ಮನವಿ ಮಾಡಿದ ಬಳಿಕ ರೋಂನಲ್ಲಿ ಮಾ.15ರಂದು ನಡೆದ ಸಮ್ಮೇಳನದಲ್ಲಿ ಭಾರತ ತನ್ನ ವಾರ್ಷಿಕ ನೆರವಿನ  ಪ್ರಮಾಣದಲ್ಲಿ ಗಮನಾರ್ಹ ಹೆಚ್ಚಳವನ್ನು ಮಾಡಿರುವುದಾಗಿ ಘೋಷಿಸಿದೆ. "ವಿಶ್ವದಾದ್ಯಂತದ ಪ್ಯಾಲೆಸ್ಟೈನ್ ನಿರಾಶ್ರಿತರಿಗೆ ಸಾರ್ವಜನಿಕ ಸೇವೆಗಳನ್ನು ಒದಗಿಸುವ ಯುಎನ್ಆರ್ಡಬ್ಲ್ಯೂಎ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ಹೆಚ್ಚಳ ಮಾಡಲಾಗಿದೆ" ಸಚಿವಾಲಯ ಸ್ಪಷ್ಟನೆ ನೀಡಿದೆ.
ಕಳೆದ ವರ್ಷ ಸೆಪ್ಟಂಬರ್ 19 ರಂದು ಪ್ಯಾಲೆಸ್ತೈನ್ ನಲ್ಲಿ  ಅಸಂಘಟಿತ ಚಳವಳಿ (ಎನ್ಎಎಂ) ಸಭೆಯಲ್ಲಿ ಪಾಲ್ಗೊಂಡಿದ್ದ ದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಯುಎನ್ಆರ್ಡಬ್ಲ್ಯೂಎಗೆ ಹೆಚ್ಚುವರಿ ನೆರವನ್ನು ನಿಡುವುದಾಗಿ ಹೇಳಿದ್ದರು. ಅವರ ಮಾತಿನ ಬದ್ದತೆಗಾಗಿ ಭಾರತ ತನ್ನ ನೆರವಿನಲ್ಲಿ ನಾಲ್ಕು ಪಟ್ಟು ಏರಿಕೆ ಮಾಡಿದೆ. ಇದು ಪ್ಯಾಲೆಸ್ತೈನ್ ಜತೆಗಿನ ಭಾರತದ ಸಂಬಂಧ ವರ್ಧನೆಯ ಭಾಗವಾಗಿದೆ.  ಕಳೆದ ಫೆಬ್ರವರಿ 10 ರಂದು ಪ್ರಧಾನಿ ನರೇಂದ್ರ ಮೋದಿ ಪ್ಯಾಲೆಸ್ತೈನ್ ಗೆ ಐತಿಹಾಸಿಕ ಭೇಟಿ ನಿಡಿದ್ದರು. ಇದು ಪಶ್ಚಿಮ ಏಷ್ಯಾ ರಾಷ್ಟ್ರಕ್ಕೆ ಭಾರತ ಪ್ರಧಾನಿಗಳೊಬ್ಬರು ನೀಡಿದ್ದ ಪ್ರಥಮ ಭೇಟಿ ಎನಿಸಿದೆ.
SCROLL FOR NEXT