ಸಂಗ್ರಹ ಚಿತ್ರ 
ದೇಶ

ನಾಲ್ವರು ಪ್ರಿಯಕರರ ನೆರವಿನಿಂದ ಗಂಡನನ್ನು ಕೊಂದು 3 ತುಂಡು ಮಾಡಿದ ಪತ್ನಿ!

ಗೃಹಿಣಿಯೊರ್ವಳು ನಾಲ್ವರು ಪ್ರಿಯಕರರ ನೆರವಿನಿಂದ ತನ್ನ ಗಂಡನನ್ನೇ ಕೊಂದು ಆತನ ದೇಹವನ್ನು ಮೂರು ತುಂಡುಗಳಾಗಿ ಕತ್ತರಿಸಿರುವ ಘಟನೆ ಗೋವಾದಲ್ಲಿ ನಡೆದಿದೆ...

ಮಾರ್ಗೋವಾ: ಗೃಹಿಣಿಯೊರ್ವಳು ನಾಲ್ವರು ಪ್ರಿಯಕರರ ನೆರವಿನಿಂದ ತನ್ನ ಗಂಡನನ್ನೇ ಕೊಂದು ಆತನ ದೇಹವನ್ನು ಮೂರು ತುಂಡುಗಳಾಗಿ ಕತ್ತರಿಸಿರುವ ಘಟನೆ ಗೋವಾದಲ್ಲಿ ನಡೆದಿದೆ. 
ಕರ್ನಾಟಕದ ಬೈಲಹೊಂಗಲದ 30ರ ಹರೆಯದ ತನ್ನ ಪತಿ ಬಸವರಾಜ್ ಬಾರಿಕಿ ಎಂಬಾತನನ್ನು ಪತ್ನಿ 30 ವರ್ಷದ ಕಲ್ಪನಾ ಬಾರಿಕಿ ಪ್ರಿಯಕರರ ಜತೆ ಸೇರಿಕೊಂಡು ಹತ್ಯೆ ಮಾಡಿದ್ದಾಳೆ. ಈ ಪ್ರಕರಣ ಸಂಬಂಧ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. 
ಗೋವಾ-ಕರ್ನಾಟಕದ ಗಡಿಯಲ್ಲಿನ ಅನ್ ಮೋಡ್ ಘಾಟ್ ಪ್ರದೇಶದಲ್ಲಿ ಪತಿಯ ಮೂರು ಭಾಗಗಳನ್ನು ಎಸೆದು ವಿಲೇವಾರಿ ಮಾಡಿರುವುದಾಗಿ ಕಲ್ಪನ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 
ಏಪ್ರಿಲ್ 1ರಂದು ನಡೆದ ಈ ಕೊಲೆಗೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಯೊರ್ವ ಎರಡು ದಿನಗಳ ಹಿಂದಷ್ಟೇ ಪೊಲೀಸರಿಗೆ ಮಾಹಿತಿ ನೀಡ್ದದ. ಇಲ್ಲದಿದ್ದರೆ ಈ ಕೊಲೆ ಪ್ರಕರಣ ಯಾರ ಗಮನಕ್ಕೂ ಬಾರದೇ ಮುಚ್ಚಿಹೋಗುವ ಸಾಧ್ಯತೆ ಇತ್ತು. 
ಉತ್ತರ ಗೋವಾದಲ್ಲಿ ಟ್ಯಾಕ್ಸಿ ಚಾಲಕನಾಗಿ ದುಡಿಯುತ್ತಿದ್ದ ಬಸವರಾಜ್ ಹದಿನೈದು ದಿನಗಳಿಗೊಮ್ಮೆ ಮನೆಗೆ ಬರುತ್ತಿದ್ದ ಪತ್ನಿಗೆ ಅನೈತಿಕ ಸಂಬಂಧ ಇರುವ ಬಗ್ಗೆ ಶಂಕೆ ಹೊಂದಿದ್ದ ಈ ಕುರಿತು ಆಕೆಯೊಂದಿಗೆ ಆತ ಜಗಳ ಮಾಡುತ್ತಿದ್ದ ಎಂದು ಕಲ್ಪನ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

Belagavi: ಲವರ್ ಜೊತೆ ಮಗಳು ಪರಾರಿ, ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

SCROLL FOR NEXT