ನವದೆಹಲಿ: ದೆಹಲಿಯಲ್ಲಿ 20 ಕಿಲೋ ಲೀಟರ್ ನೀರನ್ನು ಉಚಿತವಾಗಿ ಪೂರೈಕೆ ಮಾಡುವ ದೆಹಲಿ ಸರ್ಕಾರದ ಯೋಜನೆಯನ್ನು ಹೈಕೋರ್ಟ್ ಟೀಕಿಸಿದೆ.
ಬಡವರಿಗೆ ಅಗತ್ಯವಿರುವುದನ್ನು ಹೊರತುಪಡಿಸಿ ಯಾವುದನ್ನೂ ಉಚಿತವಾಗಿ ನೀಡಬಾರದು ಎಂದು ದೆಹಲಿ ಹೈಕೋರ್ಟ್ ಹೇಳಿದ್ದು, ಸ್ಲಮ್ ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಗೆ ಉಚಿತವಾಗಿ ನೀರು ಪೂರೈಕೆ ಮಾಡುವುದನ್ನು ಒಪ್ಪಬಹುದು ಆದರೆ ನೀರಿನ ಶುಲ್ಕ ಪಾವತಿ ಮಾಡಲು ಸಾಧ್ಯವಿರುವವರಿಗೂ ಉಚಿತವಾಗಿ ನೀಡುವುದನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದಿದೆ.
ದೆಹಲಿ ನಗರದಲ್ಲಿ ಶೇ.100 ರಷ್ಟು ಒಳ ಚರಂಡಿ ವ್ಯವಸ್ಥೆಯನ್ನು ನೀಡಲು ದೆಹಲಿ ಜಲ ಮಂಡಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್, ದೆಹಲಿಯಲ್ಲಿ 20 ಕಿಲೋ ಲೀಟರ್ ನೀರನ್ನು ಉಚಿತವಾಗಿ ಪೂರೈಕೆ ಮಾಡುವ ದೆಹಲಿ ಸರ್ಕಾರದ ಯೋಜನೆಯನ್ನು ಟೀಕಿಸಿದೆ.