ವಿಶ್ವ ಅಗ್ಗದ ವಿಮಾನಯಾನ ಸಂಸ್ಥೆಗಳ ಪಟ್ಟಿ: ಟಾಪ್ 5ರಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್, ಇಂಡಿಗೋ 
ದೇಶ

ವಿಶ್ವ ಅಗ್ಗದ ವಿಮಾನಯಾನ ಸಂಸ್ಥೆಗಳ ಪಟ್ಟಿ: ಟಾಪ್ 5ರಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್, ಇಂಡಿಗೋ

ಭಾರತೀಯ ವಿಮಾನಯಾನ ಸಂಸ್ಥೆ ಇಂಡಿಗೋ ಹಾಗೂ ಏರ್ ಇಂಡಿಯಾ ಎಕ್ಸ್ ಪ್ರೆಸ್ ಗಳು ಜಾಗತಿಕವಾಗಿ ಅತಿ ಕಡಿಮೆ ವೆಚ್ಚದಲ್ಲಿ ಅಂತರರಾಷ್ಟ್ರೀಯ ಸಂಪರ್ಕವನ್ನು .....

ನವದೆಹಲಿ: ಭಾರತೀಯ ವಿಮಾನಯಾನ ಸಂಸ್ಥೆ ಇಂಡಿಗೋ ಹಾಗೂ ಏರ್ ಇಂಡಿಯಾ ಎಕ್ಸ್ ಪ್ರೆಸ್ ಗಳು ಜಾಗತಿಕವಾಗಿ ಅತಿ ಕಡಿಮೆ ವೆಚ್ಚದಲ್ಲಿ  ಅಂತರರಾಷ್ಟ್ರೀಯ ಸಂಪರ್ಕವನ್ನು ಒದಗಿಸುವ ಐದು ಅಗ್ಗದ  ವಿಮಾನಯಾನ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿವೆ.
ಮೆಲ್ಬೋರ್ನ್ ಮೂಲದ Rome2rio ವಿವಿಧೋದ್ದೇಶ ಪ್ರವಾಸಿ ಯೋಜನೆಗಳ ವೆಬ್ ತಾಣ ಬಿಡುಗಡೆಗೊಳಿಸಿದ ಜಾಗತಿಕ ವಿಮಾನ ದರಗಳ ವರದಿಯಲ್ಲಿ ಈ ಮಾಹಿತಿ ದೊರಕಿದೆ. ಏರ್ ಇಂಡಿಯಾ ಸ್ವಾಮ್ಯದ ಏರ್ ಇಂಡಿಯಾ ಎಕ್ಸ್ ಪ್ರೆಸ್ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದ್ದರೆ ಇಂಡಿಗೋ ಐದನೇ ಸ್ಥಾದಲ್ಲಿದೆ.
ಭಾರತೀಯ ಮೂಲದ ಇನ್ನಿತರೆ ವಿಮಾನಯಾನ ಸಂಸ್ಥೆಗಳಲ್ಲಿ ಜೆಟ್ ಏರ್ ವೇಸ್  12 ನೇ ಸ್ಥಾನ ಮತ್ತು ಏರ್ ಇಂಡಿಯಾ 13 ನೇ ಸ್ಥಾನದಲ್ಲಿದೆ.
ಏರ್ ಏಷ್ಯಾ ಎಕ್ಸ್ ಜತೆ ಸೇರಿ ನಡೆಸಿದ ಸಮೀಕ್ಷೆಯಲ್ಲಿ ಬೇರೆ ಬೇರೆ ಖಂಡಗಳ  200 ಪ್ರಮುಖ ವಿಮಾನಯಾನ ಸಂಸ್ಥೆಗಳನ್ನು ಗಣನೆಗೆ ತೆಗೆದುಕೊಲ್ಳಲಾಗಿದ್ದು ಅವುಗಳು ಪ್ರತಿ ಕಿ.ಮೀ. ಗೆ ತೆಗೆದುಕೊಳ್ಳುವ ಸರಾಸರಿ ಬೆಲೆಯನ್ನು ಅಂದಾಜಿಸಿ ಸ್ಥಾನ ನೀಡಲಾಗಿದೆ.
ಹೆಚ್ಚಾಗಿ ಗಲ್ಫ್ ರಾಷ್ಟ್ರಗಳೊಡನೆ ಸಂಪರ್ಕಿಸುವ ಏರ್ ಇಂಡಿಯಾ ಎಕ್ಸ್ ಪ್ರೆಸ್ ಪ್ರತಿ ಕಿ.ಮೀ. ಗೆ 0.08 ಡಾಲರ್ ಹಾಗೂ ಇಂಡಿಗೋ ಪ್ರತಿ ಕಿ.ಮೀ. ಗೆ  0.10 ಡಾಲರ್ ಸರಾಸರಿ ಬೆಲೆ ನಿಗದಿ ಮಾಡುತ್ತದೆ. ಇವುಗಳು ಗಲ್ಫ್ ರಾಷ್ಟ್ರಗಳಲ್ಲದೆ ಸಿಂಗಾಪುರ, ಕೊಲಂಬೋ,  ಸೇರಿ ಇತರೆ ಸ್ಥಳಳಗಳಿಗೆ ಸಹ ಇದೇ ಸರಾಸರಿ ಬೆಲೆಯಲ್ಲಿ ಸೇವೆ ಒದಗಿಸುತ್ತದೆ.
ಈ ವರ್ಷದ ಮೊದಲೆರಡು ತಿಂಗಳಿನಲ್ಲಿ ವಿಮಾನದ ಎಕಾನಮಿ ವರ್ಗದ ಪ್ರಯಾಣ ದರಗಳನ್ನು ಈ ಸಮೀಕ್ಷೆಯಲ್ಲಿ ಗಣನೆಗೆ ತೆಗೆದುಕೊಲ್ಳಲಾಗಿದೆ. ಈ ವರದಿಯಂತೆ ಜಾಗತಿಕವಾಗಿ ಐದು ಅಗ್ಗದ ವಿಮಾನಯಾನ ಸಂಸ್ಥೆಗಳಲ್ಲಿ ನಾಲ್ಕು ಏಷ್ಯಾ ಖಂಡಕ್ಕೆ ಸೇರಿದವಾಗಿದೆ.
ಇಂಡೋನೇಷಿಯಾ ಏರ್ ಏಷ್ಯಾ ಮತ್ತು ಪ್ರೈಮೆರ ಏರ್ ಗಳು ಅಗ್ರ ಐದರ ಪಟ್ಟಿಯಲ್ಲಿರುವ ಇನ್ನೆರಡು ವಿಮಾನಯಾನ ಸಂಸ್ಥೆಗಳು.
ಈ ವರದಿಯಲ್ಲಿ ಅಗ್ಗದ ದರದ ವಿಮಾನಯಾನ ಸೇವೆ ನೀಡುವ ಅಗ್ರ ಹತ್ತು ಸಂಥೆಗಳಲ್ಲಿ ಯುಕೆ, ಯುಎಸ್ ಗೆ ಸೇರಿದ ಯಾವ ವಿಮಾನಯಾನ ಸಂಸ್ಥೆಗಳ ಹೆಸರಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT