ಚೆನ್ನೈ: ಏರುತ್ತಿರುವ ವಾಯು ಮಾಲಿನ್ಯ ತಡೆಗೆ ತಮಿಳುನಾಡು ಸರ್ಕಾರ ತಾತ್ಕಾಲಿಕ ಕ್ರಮ ಕೈಗೊಂಡಿದ್ದು, ದೀಪಾವಳಿ ಹಬ್ಬದ ನಿಮಿತ್ತ ಪಟಾಕಿ ಹೊಡೆಯಲು ಕೆಲ ನಿರ್ಬಂಧ ಹೇರಿ, ಸಮಯ ನಿಗದಿಪಡಿಸಿದೆ.
ದೀಪಾವಳಿ ಸಂಭ್ರಮದ ಪ್ರಯುಕ್ತ ಪಟಾಕಿ ಹೊಡೆಯುವುದಕ್ಕೆ ಸುಪ್ರೀಂ ಕೋರ್ಟ್ ಆದೇಶಾನುಸಾರ ತಮಿಳು ನಾಡು ಸರ್ಕಾರ ಸಮಯ ನಿಗದಿ ಮಾಡಿದ್ದು, ಬೆಳಿಗ್ಗೆ 6ರಿಂದ 7ಗಂಟೆ ಹಾಗು ಸಂಜೆ 7 ರಿಂದ 8 ಗಂಟೆಯ ನಡುವೆ ಜನರು ಪಟಾಕಿ ಹೊಡೆಯಬಹುದು ಎಂದು ರಾಜ್ಯ ಸರ್ಕಾರ ಹೇಳಿದೆ.
'ಮಾಲಿನ್ಯ ಮುಕ್ತ ದೀಪಾವಳಿ ಆಚರಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಸರ್ಕಾರ ತನ್ನ ಅಧಿಕೃತ ಪ್ರಕಟಣೆಯಲ್ಲಿ ಹೇಳಿದೆ. ಅಲ್ಲದೇ ಕಡಿಮೆ ಸದ್ದು ಮಾಡುವ ಹಾಗು ಕಡಿಮೆ ಹೊಗೆ ಬಿಡುವ ಪಟಾಕಿಗಳನ್ನು ಬಳಸಲು ಸರ್ಕಾರ ಸಲಹೆ ನೀಡಿದ್ದು, ಪಟಾಕಿ ಹೊಡೆಯಲು ಪೂರ್ವಾನುಮತಿ ಪಡೆಯಲು ಕೆಲ ಸ್ವಯಂ ಸೇವಾ ಸಂಘ-ಸಂಸ್ಥೆಗಳಿಗೆ ಸರ್ಕಾರ ಸೂಚಿಸಿದೆ. ದೀಪಾವಳಿಯ ವಾರದ ಮುನ್ನ ಹಾಗೂ ವಾರದ ಬಳಿಕ ವಾಯು ಮಾಲಿನ್ಯದ ಮಟ್ಟಗಳನ್ನು ಪರಿಶೀಲನೆ ನಡೆಸುವುದಾಗಿ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics