ಲಖನೌ: ಕನಸಿನಲ್ಲಿ ಪದೇ ಪದೇ ಶ್ರೀರಾಮ ದೇವರು ಬರುತ್ತಿದ್ದ ಹಿನ್ನಲೆಯಲ್ಲಿ ಮುಸ್ಲಿಂ ಕುಟುಂಬವೊಂದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಘಟನೆ ಉತ್ತರಪ್ರದೇಶ ರಾಜ್ಯದ ಶಾಮ್ಲಿ ನಗರದಲ್ಲಿ ನಡೆದಿದೆ.
ಶಾಮ್ಲಿ ನಗರದ ನಿವಾಸಿ ಶಹಜಾದ್ ಕುಟುಂಬ ಶಾಸ್ತ್ರೋಕ್ತವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದೆ. ಮತಾಂತರಗೊಂಡ ಬಳಿಕ ಶ್ರೀರಾಮನ ದೇಗುಲಕ್ಕೆ ತೆರಳಿರುವ ಕುಟುಂಬ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಹಿಂದೂ ಧರ್ಮಕ್ಕೆ ಬದಲಾದ ಶಹಜಾದ್ ಅವರು ತಮ್ಮ ಹೆಸರನ್ನು ಸಂಜು ರಾಣಾ ಎಂದು ಮರು ನಾಮಕರಣ ಮಾಡಿಕೊಂಡಿದ್ದಾರೆ.
ಮತಾಂತರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರಾಣಾ ಅವರು, ನಮ್ಮ ಪೂರ್ವಜರು ಹಿಂದೂಗಳಾಗಿದ್ದರು. ಬಳಿಕ ಅವರನ್ನು ಬಲವಂತರಿಂದ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿತ್ತು. ಕಳೆದ 15-20 ದಿನಗಳಿಂದಲೂ ಶ್ರೀರಾಮ ನನ್ನ ಕನಸಿನಲ್ಲಿ ಬರುತ್ತಲೇ ಇದ್ದಾರೆ. ಕನಸಲ್ಲಿ ಹಿಂದು ಧರ್ಮಕ್ಕೆ ಬರುವಂತೆ ಕರೆಯುತ್ತಿದ್ದಾರೆ. ನಾವು ಈ ಹಿಂದೆ ಹಿಂದೂಗಳೇ ಆಗಿದ್ದೆವು. ಬಳಿಕ ಆಕ್ರಮಣಕಾರರು ನಮ್ಮ ಭೂಮಿಗೆ ಬಂದು ನಮ್ಮ ಪೂರ್ವಿಕರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದರು. ಇದೀಗ ನಾನು ನನ್ನು ಮನೆಗೆ ಮರಳಿ ಬಂದಿದ್ದೇನೆಂದು ಹೇಳಿದ್ದಾರೆ.
ನನಗೆ ಯಾವುದೇ ವ್ಯಕ್ತಿಯಿಂದಾಗಲೀ ಅಥವಾ ಗುಂಪು, ಸಂಘಟನೆಗಳಿಂದಾಗಲೀ ಒತ್ತಡಗಳಿಲ್ಲ. ಮತಾಂತರಗೊಂಡಿರುವುದಕ್ಕೆ ನನ್ನ ಕುಟುಂಬ ಸಂತಸದಲ್ಲಿದೆ ಎಂದು ತಿಳಿಸಿದ್ದಾರೆ.
ರಾಮ ಕನಸಿನಲ್ಲಿ ಬಂದಾಗ ನನ್ನ ನಿರ್ಧಾರ ಕುರಿತು ಸಮುದಾಯದವರು ಏನೆಂದು ತಿಳಿಯುತ್ತಾರೋ ಎಂಬು ಭಯದಲ್ಲಿದ್ದೆ. ನನ್ನ ನಿರ್ಧಾರ ಕೇಳಿದ ನೆರೆಮನೆಯವರು ಜೀವ ಬೆದರಿಕೆಗಳನ್ನು ಹಾಕಿದ್ದರು. ಸ್ವತಃ ನನ್ನು ಸಂಬಂಧಿಕರೇ ನನಗೆ ಬೆದರಿಕೆ ಹಾಕಿದ್ದರು. ಬಳಿಕ ನಾನು ಪೊಲೀಸರ ರಕ್ಷಣೆ ಕೋರಿದ್ದೆ. ಇದರಂತೆ ಜೀವವನ್ನು ಕೈಯಲ್ಲಿ ಇಟ್ಟುಕೊಂಡು ಪೊಲೀಸ್ ಠಾಣೆಗೆ ಹೋಗಿ ನನಗೆ ಹಾಗೂ ಮಕ್ಕಳಿಗೆ ರಕ್ಷಣೆ ನೀಡುವಂತೆ ಕೋರಿದ್ದೆ ಎಂದಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧಿಕಾರಿ ದಿನೇಶ್ ಕುಮಾರ್ ಅವರು, ವ್ಯಕ್ತಿಯ ಜೀವ ಬೆದರಿಕೆ ಕೂರಿತಂತೆ ನಮಗೆ ಯಾವುದೇ ರೀತಿಯ ಸಾಕ್ಷ್ಯಾಧಾರಗಳು ದೊರಕಲಿಲ್ಲ. ಮತಾಂತರಗೊಳ್ಳುವುದು ಆತನ ವೈಯಕ್ತಿಕ ವಿಚಾರ. ಇದನ್ನು ಸಂವಿಧಾನ ಕೂಡ ಪರಿಗಣಿಸುತ್ತದೆ. ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಯಾವುದೇ ಸಂಘಟನೆಗಳು ರಾಣಾ ಅವರ ಮೇಲೆ ಒತ್ತಡ ಹೇರಿರುವುದಕ್ಕೂ ಸಾಕ್ಷ್ಯಾಧಾರಗಳು ದೊರಕಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos