ಭಾರತದ ವಿರೋಧದ ನಡುವೆಯೇ ಚೀನಾ-ಪಾಕಿಸ್ತಾನ ನಡುವೆ ಬಸ್ ಸೇವೆ ಆರಂಭ
ಭಾರತದ ವಿರೋಧದ ನಡುವೆಯೇ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆ(ಸಿಪಿಇಸಿ)ಯಡಿ ಪಾಕ್...
ನವದೆಹಲಿ: ಭಾರತದ ವಿರೋಧದ ನಡುವೆಯೇ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆ(ಸಿಪಿಇಸಿ)ಯಡಿ ಪಾಕ್ ಆಕ್ರಮಿಕ ಕಾಶ್ಮೀರದ ಮೂಲಕ ಚೀನಾ-ಪಾಕಿಸ್ತಾನ ನಡುವೆ ಖಾಸಗಿ ಬಸ್ ಸಂಚಾರ ಸೇವೆಗೆ ಸೋಮವಾರ ರಾತ್ರಿ ಚಾಲನೆ ನೀಡಲಾಗಿದೆ.
ಪಾಕಿಸ್ತಾನ ಸುದ್ದಿ ಸಂಸ್ಥೆಯೊಂದರ ವರದಿ ಪ್ರಕಾರ, ಪಾಕ್ ಆಕ್ರಮಿತ ಕಾಶ್ಮೀರ ಮೂಲಕ ಪಾಕಿಸ್ತಾನದ ಲಾಹೋರ್ ನಿಂದ ಚೀನಾದ ಕಷ್ಗರ್ ನಡುವೆ ಬಸ್ ಸೇವೆಗೆ ಚಾಲನೆ ನೀಡಲಾಗಿದ್ದು, 36 ಗಂಟೆಗಳ ಪ್ರಯಾಣ ಇದಾಗಿದೆ.
ಇತ್ತೀಚಿಗಷ್ಟೇ ಭಾರತದ ವಿದೇಶಾಂಗ ಸಚಿವಾಲಯ ವಕ್ತಾರ ರವೀಶ್ ಕುಮಾರ್ ಅವರು ಈ ಬಸ್ ಸೇವೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಈ ಬಸ್ ಸೇವೆ ಉಲ್ಲಂಘಿಸುತ್ತದೆ ಎಂದಿದ್ದರು.
1963ರಲ್ಲಿ ಮಾಡಿಕೊಂಡಿದ್ದ ಚೀನಾ-ಪಾಕಿಸ್ತಾನ ಗಡಿ ಒಪ್ಪಂದ ಅಕ್ರಮ, ಕಾನೂನು ಬಾಹಿರವಾಗಿದ್ದು ಅದಕ್ಕೆ ಮೌಲ್ಯವಿಲ್ಲವಾಗಿದೆ. ಅದನ್ನು ಭಾರತ ಸರ್ಕಾರ ಎಂದಿಗೂ ಗುರುತಿಸಲಿಲ್ಲ. ಹೀಗಾಗಿ ಪಾಕ್ ಆಕ್ರಮಿತ ಕಾಶ್ಮೀರ ಮೂಲಕ ಯಾವುದೇ ಬಸ್ ಸೇವೆ ಭಾರತದ ಸ್ವಾಯತ್ತತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆಯನ್ನುಂಟುಮಾಡುತ್ತದೆ ಎಂದು ರವೀಶ್ ಕುಮಾರ್ ಹೇಳಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.