ರಾಯ್ ಪುರ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಅರ್ಬನ್ ನಕ್ಸಲ್ ಗೆ ಬಹು ದೊಡ್ಡ ಉದಾಹರಣೆಯಾಗಿದ್ದಾರೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಹೇಳಿದ್ದಾರೆ. ಈ ವಿಷಯದಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷ ಒಂದೇ ರೀತಿಯ ಪಕ್ಷಗಳಾಗಿವೆ ಎಂದು ತಿವಾರಿ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಿವಾರಿ, ನಗರ ನಕ್ಸಲ್ ಕುರಿತಾಗಿ ಈಚೆಗೆ ಪಕ್ಷದ ನಾಯಕರಾದ ರಾಜ್ ಬಬ್ಬರ್ ಮತ್ತು ನವಜ್ಯೋತ್ ಸಿಂಗ್ ಸಿಧು ನೀಡಿರುವ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಕಾಂಗ್ರೆಸ್ ತನ್ನ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಬೇಕು ಒತ್ತಾಯಿಸಿದ್ದಾರೆ.ತ
"ಒಬ್ಬ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲರು ಗಣರಾಜ್ಯೋತ್ಸವ ಪರೇಡ್ ನಿಲ್ಲಿಸಲು ಧರಣಿ ಕುಳಿತದ್ದು ವಿಪರ್ಯಾಸ, ನಕ್ಸಲರು ಕ್ರಾಂತಿಕಾರಿಗಳು ಎಂದು ವರ್ಣಿಸಿದ್ದ ಯುಪಿ ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ಅವರನ್ನು ತಿವಾರಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಇನ್ನೋರ್ವ ಕಾಂಗ್ರೆಸ್ ನಾಯಕ ನವಜ್ಯೋತ್ ಸಿಂಗ್ ಅವರು ಈಚಿನ ತಮ್ಮ ಪಾಕ್ ಭೇಟಿಯಲ್ಲಿ ಅಲ್ಲಿನ ಸೇನಾ ಮುಖ್ಯಸ್ಥನ್ನು ಆಲಂಗಿಸಿದ್ದು ದೊಡ್ಡ ದುರಂತ, ಛತ್ತೀಸ್ ಗಡದಲ್ಲಿರುವ ಬಿಜೆಪಿ ಸರ್ಕಾರ ನಕ್ಸಲರ ಸಮಸ್ಯೆಯನ್ನು ಮಟ್ಟಹಾಕಲು ಸೂಕ್ತ ಕ್ರಮ ಕೈಗೊಳ್ಳುತ್ತಿದೆ, ಮುಖ್ಯಮಂತ್ರ ರಮಣ್ ಸಿಂಗ್ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದ ಹೊಗಳಿದ್ದಾರೆ.