ಗೌಹಾಟಿ: ಶಂಕಿತ ಉಲ್ಫಾ ಉಗ್ರಗಾಮಿಗಳು ನಡೆಸಿದ ಗ್ಗ್ರೆನೇಡ್ ದಾಳಿಯಲ್ಲಿ ಓರ್ವ ಸತ್ತು ಹಲವರು ಗಾಯಗೊಂಡಿರುವ ಘಟನೆ ಅಸ್ಸಾಂ ನ ಸಿಬ್ ಸಾಗರ್ ಜಿಲ್ಲೆಯಲ್ಲಿ ನಡೆದಿದೆ.
ಗುರುವಾರ ಸಂಜೆ ಸಂಭವಿಸಿದ ಘಟನೆಯಲ್ಲಿ ಜಿಲ್ಲೆಯ ಡೆಮೌ ಪ್ರದೇಶದ ಹಾರ್ಡ್ ವೇರ್ ಶಾಪ್ ಒಂದರಲ್ಲಿ ಗ್ರೆನೇಡ್ ಸ್ಪೋಟ ಸಂಭವಿಸಿದೆ.ಸ್ಪೋಟದಿಂದ ಅಂಗಡಿ ಮಾಲೀಕ ತೀವ್ರವಾಗಿ ಗಾಯಗೊಂಡಿರುವುದಾಗಿ ಪೋಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣದಲ್ಲಿ ಮೃತನಾದ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಸ್ಪೋಟದ ಬಳಿಕ ಹಿರಿಯ ಪೋಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರಶೀಲನೆ ನಡೆಸಿದ್ದಾರೆ. ಇದು ಶಂಕಿತ ಉಲ್ಫಾ ಸಂಘಟನೆಗಳ ಕೃತ್ಯ ಎಂದು ಪೋಲೀಸರು ಅನುಮಾನ ವ್ಯಕ್ತಪಡಿಸಿದ್ದು ತನಿಖೆಯನ್ನು ತೀವ್ರಗೊಳಿಸಿದ್ದಾರೆ.