ಜೈಪುರ್: ರಾಜಸ್ತಾನದ ಟೋಂಕ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಸಚಿನ್ ಪೈಲಟ್ ಗೆ ಹಿಂದಿನ ರಾಜ ಕುಟುಂಬ ಬೆಂಬಲ ಸೂಚಿಸಿದೆ.
ಟೋಂಕ್ ವಿಧಾನಸಭಾ ಕ್ಷೇತ್ರದ ರಾಜ ಕುಟುಂಬವಾದ ನವಾಬ ಅಫ್ತಾಬ್ ಆಲಿ ಖಾನ್ ತಮ್ಮ ಮನೆತನದ ಸದಸ್ಯರಿಗೆ ಸಚಿನ್ ಅವರಿಗೆ ಮತ ಹಾಕುವಂತೆ ಕೇಳಿಕೊಂಡಿದ್ದಾರೆ. ಆ ಕ್ಷೇತ್ರದಲ್ಲಿ ಟೋಂಕ್ ರಾಜ ಕುಟುಂಬ ಪ್ರಭಾವಿ ಮನೆತನವಾಗಿದ್ದು ರಾಜಕೀಯವಾಗಿ ಯಾವುದೇ ಪಾತ್ರ ಹೊಂದಿಲ್ಲ.
ಬಿಜೆಪಿಯಿಂದ ಈ ಕ್ಷೇತ್ರದಲ್ಲಿ ಸಾರಿಗೆ ಸಚಿವ ಯೂನಸ್ ಖಾನ್ ಸ್ಪರ್ಧೆಗಿಳಿದಿದ್ದಾರೆ.
ಈ ರಾಜಮನೆತನದ ಅಧಿಕೃತ ಅಂಗ ಅಂಜುಮಾನ್ ಆಗಿದ್ದು 8.500 ಅಧಿಕೃತ ಸದಸ್ಯರನ್ನು ಹೊಂದಿದ್ದಾರೆ. ಈ ಕ್ಷೇತ್ರದಲ್ಲಿ ಮುಸ್ಲಿಂರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.