ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಈ ಬಾರಿಯ ಚುನಾವಣೆ ನಾಮ್'ದಾರ್'ಗಳ ವಿರುದ್ಧ ಕಾಮ್'ದಾರ್'ಗಳ ಹೋರಾಟ: ಪ್ರಧಾನಿ ಮೋದಿ

ಈ ಬಾರಿಯ ರಾಜಸ್ಥಾನ ಚುನಾವಣೆಯಲ್ಲಿ ನಾಮ್'ದಾರ್ (ದೊಡ್ಡ ವಂಸಕ್ಕೆ ಸೇರಿದವರು)ಗಳ ವಿರುದ್ಧ ಕಾಮ್'ದಾರ್ (ಕೆಲಸಗಾರ)ಗಳು ಹೋರಾಟ ಮಾಡುತ್ತಾರೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಹೇಳಿದ್ದಾರೆ...

ಪ್ರಧಾನಮಂತ್ರಿ ನರೇಂದ್ರ ಮೋದಿ
Manjula VN
Updated On : 28 Nov 2018, 2:20 am
ನಾಗ್ಪುರ: ಈ ಬಾರಿಯ ರಾಜಸ್ಥಾನ ಚುನಾವಣೆಯಲ್ಲಿ ನಾಮ್'ದಾರ್ (ದೊಡ್ಡ ವಂಸಕ್ಕೆ ಸೇರಿದವರು)ಗಳ ವಿರುದ್ಧ ಕಾಮ್'ದಾರ್ (ಕೆಲಸಗಾರ)ಗಳು ಹೋರಾಟ ಮಾಡುತ್ತಾರೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಹೇಳಿದ್ದಾರೆ. 
ರಾಜಸ್ಥಾನದ ನಾಗ್ಪುರದಲ್ಲಿ ಮಾತನಾಡಿರುವ ಮೋದಿಯವರು, ಕಾಂಗ್ರೆಸ್ ಪಕ್ಷದ ವಂಶಾಡಳಿತದ ವಿರುದ್ದ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. 
ತಮ್ಮ ಹಾಗೂ ಕಾಂಗ್ರೆಸ್ ನಾಯಕರ ನಡುವಿನ ವ್ಯತ್ಯಾಸವನ್ನು ನಾಮ್'ದಾರ್ ಹಾಗೂ ಕಾಮ್'ದಾರ್ ಎಂದು ಹೋಲಿಕೆ ಮಾಡಿದ್ದಾರೆ. ನಾನು ಸಾಮಾನ್ಯ ವ್ಯಕ್ತಿ. ನಾನು ಚಿನ್ನದ ಸ್ಪೂನ್'ನ್ನು ಬಾಯಲ್ಲಿ ಇಟ್ಟುಕೊಂಡು ಹುಟ್ಟಲಿಲ್ಲ. 

Advertisement

Advertisement

ನಮ್ಮ ಮೊಮ್ಮಗ ಅಥವಾ ಮೊಮ್ಮಗಳಿಗಾಗಿ ನಾವು ಮತವನ್ನು ಕೇಳುತ್ತಿಲ್ಲ. ಜನರ ಕಲ್ಯಾಣಕ್ಕಾಗಿ, ಜನರ ಕನಸು ನನಸಾಗಿರುವ ಸಲುವಾಗಿ ಕೇಳುತ್ತಿದ್ದೇವೆಂದು ಹೇಳಿದ್ದಾರೆ. 
ನಾಲ್ಕು ತಲೆಮಾರುಗಳಿಂದ ದೇಶವನ್ನು ಆಳಿದವರಿಗೆ ಜನರ ಸಂಪರ್ಕವಿಲ್ಲ. ಇಂತಹವರಿಗೆ ಸಾಮಾನ್ಯ ಜನರ ನೋವು ಅರ್ಥವಾಗುವುದಿಲ್ಲ. ಸಬ್'ಕಾ ಸಾಥ್, ಸಬ್'ಕಾ ವಿಕಾಸ್ ನಮ್ಮ ಮಂತ್ರವಾಗಿದೆ. ರಾಜ್ಯದಲ್ಲಿ ಮತ್ತೆ ವಸುಂದರಾ ರಾಜೇಯವರಿಗೆ ಅವಕಾಶ ನೀಡಿ. ರಾಜ್ಯದಲ್ಲಿ ನೀರಿನ ಸಮಸ್ಯೆ ದೊಡ್ಡದಾಗಿದ್ದು, ರಾಜೇ ಅವರ ಸರ್ಕಾರ 1.5 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement