ನವದೆಹಲಿ: ಖಲಿಸ್ತಾನ್ ಭಯೋತ್ಪಾದಕ ಮುಖಂಡನೊಂದಿಗ ಫೋಟೋ ತೆಗೆಸಿಕೊಂಡಿರುವ ಪಂಜಾಬ್ ಸಚಿವ ನವಜೋತ್ ಸಿಂಗ್ ವಿರುದ್ಧ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಶುಕ್ರವಾರ ತೀವ್ರವಾಗಿ ಕಿಡಿಕಾರಿದ್ದಾರೆ.
ನವಜೋತ್ ಸಿಧುರನ್ನು ರಾಷ್ಟ್ರೀಯ ಭದ್ರತಾ ಕಾಯಿದೆ ಅಡಿಯಲ್ಲಿ ಬಂಧನಕ್ಕೊಳಪಡಿಸಿ, ರಾಷ್ಟ್ರೀಯ ತನಿಖಾ ದಳ ಈ ಕುರಿತು ತನಿಖೆ ನಡೆಸಬೇಕೆಂದು ಸುಬ್ರಮಣಿಯನ್ ಸ್ವಾಮಿಯವರು ಹೇಳಿದ್ದಾರೆ.
ಗೋಪಾಲ್ ಚಾವ್ಲಾ ಯಾರೆಂಬುದೇ ನನಗೆ ಗೊತ್ತಿಲ್ಲ ಎಂದು ಸಿಧು ಹೇಳಿದ್ದಾರೆ. ಹಾಗಿದ್ದರೆ, ಖಲಿಸ್ತಾನದ ಜೊತೆಗೆ ನನಗೆ ಯಾವುದೇ ಸಂಬಂಧವಿಲ್ಲ. ಇದನ್ನ ಖಂಡಿಸುತ್ತೇನೆಂದು ಹೇಳಬೇಕಿತ್ತು. ಆದರೂ, ಎನ್ಐಎ ಈ ಕುರಿತು ತನಿಖೆ ನಡೆಸಬೇಕು ಹಾಗೂ ರಾಷ್ಟ್ರೀಯ ಭದ್ರತಾ ಕಾಯಿದೆ ಅಡಿಯಲ್ಲಿ ಸಿಧುರನ್ನು ಬಂಧನಕ್ಕೊಳಪಡಿಸಬೇಕೆಂದು ತಿಳಿಸಿದ್ದಾರೆ.
ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಶಂಕುಸ್ಥಾಪನೆಗೆಂದು ಪಾಕಿಸ್ತಾನಕ್ಕೆ ಹೋಗಿದ್ದ ಪಂಜಾಬ್ ಸಚಿವ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಪಾಕ್ ಪ್ರಧಾನಿಯನ್ನು ಹೊಗಳಿ ಹಾಗೂ ಪಾಕ್ ಪ್ರಧಾನಿಯಿಂದ ಹೊಗಳಿಸಿಕೊಂಡು ವಿವಾದಕ್ಕೀಡಾಗಿದ್ದರು. ಇದೀಗ ಪಾಕಿಸ್ತಾನದಲ್ಲಿರುವ ಸಿಖ್ ಖಲಿಸ್ತಾನ ಭಯೋತ್ಪಾದಕ ಮುಖಂಡನೊಂದಿಗೆ ಪೋಟೋ ತೆಗೆಸಿಕೊಂಡು ಮತ್ತೆ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.
ಗೋಪಾಲ್ ಸಿಂಗ್ ಚಾಲ್ವಾ ಎಂಬ ಪಾಕಿಸ್ತಾನ ಸಿಕ್ ಗುರುದ್ವಾರ ಪ್ರಬಂಧಕ ಸಮಿತಿ ಅಧ್ಯಕ್ಷ. ಪ್ರತ್ಯೇಕ ಖಲಿಸ್ತಾನ ರಾಷ್ಟ್ರ ಸ್ಥಾಪನೆಯ ಮುಂಚೂಣಿ ಉಗ್ರ ಗಾಮಿ ಮುಖಂಡನೂ ಕೂಡ ಹೌದು. ಈತ ಸಿಧು ಜೊತೆ ಕರ್ತಾರ್ಪುರದಲ್ಲಿ ಫೋಟೋ ತೆಗೆಸಿಕೊಂಡಿರುವುದು ಇದೀಗ ವಿವಾದಕ್ಕೀಡಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics