ನವದೆಹಲಿ: 2019 ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ದುರುಪಯೋಗವಾಗದಂತೆ ತಡೆಯಲು ನೂರಾರು ಜನರನ್ನು ಹೊಂದಿರುವ ಕಾರ್ಯಪಡೆ ಸ್ಥಾಪಿಸುವುದಾಗಿ ಫೇಸ್ ಬುಕ್ ಇಂದು ಹೇಳಿದೆ.
ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳೊಂದಿಗೆ ಒಟ್ಟಾಗಿ ಕೆಲಸ ಮಾಡಲು ತಜ್ಞರ ಗುಂಪನ್ನು ಒಂದುಗೂಡಿಸುವುದಾಗಿ ಯುರೋಪ್, ಮಧ್ಯ ಪೂರ್ವ ಮತ್ತು ಆಫ್ರಿಕಾ ನೀತಿ ( ಇಎಂಇಎ) ಉಪಾಧ್ಯಕ್ಷ ರಿಚರ್ಡ್ ಅಲ್ಲನ್ ತಿಳಿಸಿದ್ದಾರೆ.
ಈ ಗುಂಪಿನಲ್ಲಿ ಭದ್ರತಾ ಹಾಗೂ ವಿಷಯ ಸಂಬಂಧಿತ ಕಟೆಂಟ್ ಪರಿಣಿತರು ಇರಲಿದ್ದು, ಭಾರತದಲ್ಲಿ ಚುನಾವಣಾ-ಸಂಬಂಧಿತ ದುರುಪಯೋಗದ ಎಲ್ಲಾ ರೀತಿಯ ರೂಪಗಳನ್ನು ಅರ್ಥಮಾಡಿಕೊಳ್ಳಲು ಅವರು ಪ್ರಯತ್ನಿಸಲಿದ್ದಾರೆ ಎಂದು ಕಾರ್ಯಾಗಾರವೊಂದರಲ್ಲಿ ಪಾಲ್ಗೊಂಡು ಅಲ್ಲನ್ ಮಾತನಾಡುತ್ತಿದ್ದರು.
ನೈಜ ರಾಜಕೀಯ ಸುದ್ದಿಗಳು ಹಾಗೂ ರಾಜಕೀಯ ಪ್ರಚಾರ ಎಂಬುದಾಗಿ ಪ್ರತ್ಯೇಕಿಸಬೇಕಾದದ್ದು, ಕಾರ್ಯಪಡೆಯ ಪ್ರಮುಖ ಸವಾಲಾಗಿರುತ್ತದೆ. ಈ ತಂಡದಲ್ಲಿ ಹೆಚ್ಚಿನವರೂ ದೇಶವಾಸಿಗಳೇ ಇರಲಿದ್ದು,ಚುನಾವಣೆಗೆ ಸಂಬಂಧಿಸಿದ ವಿಷಯಗಳಿಗೆ ಕಂಪನಿ ಮತ್ತು ಹೊಸದಾಗಿ ನೇಮಕಗೊಂಡಿರುವ ಕೆಲಸಗಾರರು ಇಬ್ಬರೂ ಕೆಲಸ ನಿರ್ವಹಿಸಲಿದ್ದಾರೆ ಎಂದು ಅವರು ಹೇಳಿದರು.