ನವದೆಹಲಿ: ತನ್ನ ಸ್ನೇಹಿತ ಹಾಗೂ ತನ್ನೊಂದಿಗೆ ಸೆಕ್ಸ್ ಮಾಡುವುದಕ್ಕೆ ಒಪ್ಪದ ಕಾರಣ ಮಹಿಳೆಯನ್ನು ವಾಚ್ಮ್ಯಾನ್ವೋರ್ವ ಇರಿದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಅಕ್ಟೋಬರ್ 6ರಂದು 42 ವರ್ಷದ ಮಹಿಳೆಯ ಮೃತದೇಹವೊಂದು ವಿವೇಕ್ ವಿಹಾರ್ ಪ್ರದೇಶದ ಮನೆವೊಂದರಲ್ಲಿ ಪತ್ತೆಯಾಗಿತ್ತು. ಇದೇ ಮನೆಯಲ್ಲಿ ವಾಚ್ಮ್ಯಾನ್ ಮಹಿಳೆಯನ್ನು ಕರೆದುಕೊಂಡು ಬಂದು ಅನೈತಿಕ ಚಟುವಟಿಕೆ ನಡೆಸುತ್ತಿದ್ದನು. ಇದನ್ನು ಗಮನಿಸಿದ್ದ ಸ್ಥಳೀಯರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಚ್ಮ್ಯಾನ್ ಕೈವಾಡವಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು.
ಈ ಶಂಕೆ ಹಿನ್ನೆಲೆಯಲ್ಲಿ ಪೊಲೀಸರು 40 ವರ್ಷದ ವಾಚ್ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಉತ್ತರ ಪ್ರದೇಶದ ಬಿಜನೂರ್ ಮೂಲದ ಸುಶೀಲ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.
ವಿಚಾರಣೆ ವೇಳೆ ಸುಶೀಲ್ ಮಹಿಳೆಯನ್ನು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನನ್ನ ಸ್ನೇಹಿತ ಹಾಗೂ ನನ್ನೊಂದಿಗೆ ಸೆಕ್ಸ್ ಮಾಡಲು ಮಹಿಳೆ ನಿರಾಕರಿಸಿದ್ದರಿಂದ ಕೊಲೆ ಮಾಡಿದೆ ಎಂದು ಹೇಳಿದ್ದಾನೆ.