ರಾಹುಲ್ ಗಾಂಧಿ 
ದೇಶ

#MeToo: ಪ್ರತಿಯೊಬ್ಬರು ಮಹಿಳೆಯರೊಂದಿಗೆ ಘನತೆ, ಗೌರವದಿಂದ ವರ್ತಿಸಬೇಕು- ರಾಹುಲ್ ಗಾಂಧಿ

ಮಹಿಳೆಯರಿಗೆ ಲೈಂಗಿಕ ಕಿರುಕುಳ ವಿರುದ್ಧ ಸಾಮಾಜಿಕ ಜಾಲತಾಣಗಳ ಮೂಲಕ ದೇಶಾದ್ಯಂತ ಪಸರಿಸಿರುವ # ಮಿ ಟೂ ಅಭಿಯಾನಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಮಹಿಳೆಯರಿಗೆ ಲೈಂಗಿಕ ಕಿರುಕುಳ ವಿರುದ್ಧ ಸಾಮಾಜಿಕ ಜಾಲತಾಣಗಳ ಮೂಲಕ ದೇಶಾದ್ಯಂತ ಪಸರಿಸಿರುವ # ಮಿ ಟೂ ಅಭಿಯಾನಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಪ್ರತಿಯೊಬ್ಬರು ಮಹಿಳೆಯರೊಂದಿಗೆ ಗೌರವ ಹಾಗೂ ಘನತೆಯಿಂದ ವರ್ತಿಸುವುದನ್ನು ಕಲಿಯುವ ಸಮಯವಾಗಿದೆ ಎಂದು ಅವರು ಹೇಳಿದ್ದಾರೆ.

ಮಹಿಳೆಯರೊಂದಿಗೆ  ಗೌರವ ಮತ್ತು ಘನತೆಯೊಂದಿಗೆ ವರ್ತಿಸಿದವರ ಬಣ್ಣ ಬಯಲು ಮಾಡುವ ವೇದಿಕೆಯಾಗಿ ಮಿ ಟೂ ಅಭಿಯಾನ ಬಳಕೆಯಾಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದಿದ್ದಾರೆ.

ಕೆಲಸದ ಸ್ಥಳ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ಆರೋಪ ವಿರುದ್ಧ ಧ್ವನಿ ಎತ್ತಲು ಕಳೆದ ವಾರದಿಂದ # ಮಿಟೂ ಅಭಿಯಾನ ಆರಂಭವಾಗಿದ್ದು, ವಿವಿಧ ಕ್ಷೇತ್ರಗಳಲ್ಲಿನ ಮಹಿಳೆಯರು ತಮ್ಮ ಮೇಲಿನ ಲೈಂಗಿಕ ದೌರ್ಜನ್ಯ ವಿರುದ್ಧ ಧ್ವನಿ ಎತುತ್ತಿದ್ದಾರೆ.

ಈ ಸಂದರ್ಭ ಪ್ರತಿಯೊಬ್ಬರು ಮಹಿಳೆಯರಿಗೆ ಗೌರವ ಹಾಗೂ ಘನತೆಯೊಂದಿಗೆ ವರ್ತಿಸುವಂತೆ ಕಲಿಸುತ್ತಿದೆ. ಬದಲಾವಣೆ ತರಲು ಮಹಿಳೆಯರು ಮತ್ತಷ್ಟು ಗಟ್ಟಿಯಾಗಿ ಸತ್ಯವನ್ನು ತಿಳಿಸಬೇಕಾಗಿದೆ ಎಂದು ಅಗತ್ಯವಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

SCROLL FOR NEXT