ದೇಶ

#MeToo: ವಿಂತಾ ನಂದಾ ವಿರುದ್ಧ ಮಾನಹಾನಿ ಕೇಸ್, 1 ರು. ಪರಿಹಾರ ಕೇಳಿದ ಅಲೋಕ್ ನಾಥ್

Lingaraj Badiger
ಮುಂಬೈ: #MeToo ಅಭಿಯಾನದಲ್ಲಿ ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಆರೋಪ ಮಾಡಿದ್ದ ಲೇಖಕಿ ಹಾಗೂ ನಿರ್ಮಾಪಕಿ ವಿಂತಾ ನಂದಾ ವಿರುದ್ಧ ನಟ ಅಲೋಕ್ ನಾಥ್ ಅವರು ಸೋಮವಾರ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ.
ತಮ್ಮ ವಿರುದ್ಧದ  ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ವಿಂತಾ ನಂದಾ ಲಿಖಿತ ಕ್ಷಮೆ ಕೇಳಬೇಕು ಮತ್ತು 1 ರುಪಾಯಿ ಪರಿಹಾರ ನೀಡಬೇಕು ಎಂದು ಕೋರಿ ಅಲೋಕ್ ನಾಥ್ ಅವರು ಕೇಸ್ ದಾಖಲಿಸಿದ್ದಾರೆ. 
ಅಲೋಕ್​ ನಾಥ್ ಅವರು ತಮ್ಮ ಪತ್ನಿ ಜತೆ ಸೇರಿ ಜಂಟಿಯಾಗಿ ದೂರು ದಾಖಲಿಸಿದ್ದು, ನನ್ನ ಮಾನಹಾನಿ ಮಾಡಿದ್ದಕ್ಕೆ 1 ರು. ಪರಿಹಾರ ನೀಡಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಲೋಕ್ ನಾಥ್ ಅವರು ಈ ಹಿಂದೆ ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಲು ಆಗುತ್ತಿಲ್ಲ, ಒಪ್ಪಲು ಆಗುತ್ತಿಲ್ಲ ಎಂದು ಹೇಳಿಕೆ ನೀಡಿದ್ದರು.
SCROLL FOR NEXT