ಚೆನ್ನೈ: ಅಯೋಧ್ಯೆ ರಾಮ ಮಂದಿರ ವಿಷಯವಾಗಿ ಕಾಂಗ್ರೆಸ್ ಸಂಸದ ಶಶಿ ತರೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಾಬ್ರಿ ಮಸೀದಿ ಧ್ವಂಸದ ಬಗ್ಗೆ ಮಾತನಾಡಿರುವ ಶಶಿ ತರೂರ್, ಮತ್ತೊಬ್ಬರ ಧಾರ್ಮಿಕ ಶ್ರದ್ಧಾ ಕೇಂದ್ರವನ್ನು ಉರುಳಿಸಿ ಅಲ್ಲಿ ರಾಮ ಮಂದಿರ ಕಟ್ಟುವುದನ್ನು ಯಾವ ಒಳ್ಳೆಯ ಹಿಂದೂಗಳೂ ಬಯಸುವುದಿಲ್ಲ ಎಂದು ಶಶಿ ತರೂರ್ ಹೇಳಿದ್ದಾರೆ. ಚೆನ್ನೈ ನಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಶಶಿ ತರೂರ್ ಈ ಹೇಳಿಕೆ ನೀಡಿದ್ದು, 2019 ಕ್ಕೂ ಮುನ್ನ ಬಿಜೆಪಿ ಕೋಮು ದೃವೀಕಣಕ್ಕೆ ಮುಂದಾಗಲಿದೆ ಎಂದು ಹೇಳಿದ್ದಾರೆ.
ಧಾರ್ಮಿಕ ಕೇಂದ್ರಗಳನ್ನು ಕಡೆಗಣಿಸುವುದರ ಬಗ್ಗೆಯೂ ಆತಂಕ ವ್ಯಕ್ತಪಡಿಸಿರುವ ಶಶಿ ತರೂರ್, ಈ ವಿಷಯದಲ್ಲಿ ಕಾಂಗ್ರೆಸ್ ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುವುದಕ್ಕೆ ಸಿದ್ಧವಿದೆ ಎಂದು ಹೇಳಿದ್ದಾರೆ.