ನವದೆಹಲಿ: ತ್ರಿವಳಿ ತಲ್ಲಾಖ್ ತೀರ್ಪಿಗೆ ಸ್ವಾಗತ ಕೋರಿದ್ದವರು ಎಂದು ಶಬರಿಮಲೆ ತೀರ್ಪಿನ ಬಳಿಕ ಬೀದಿಗಿಳಿದಿದ್ದಾರೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಶಬರಿಮಲೆಗೆ ಮಹಿಳೆಯರ ಪ್ರವೇಶ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಕೇರಳದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸುಬ್ರಮಣಿಯನ್ ಸ್ವಾಮಿ ಕಿಡಿಕಾರಿದ್ದಾರೆ. ದೇಶದ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದ್ದು ಅದನ್ನು ಪಾಲಿಸಬೇಕಿದೆ. ಸುಪ್ರೀಂ ಕೋರ್ಟ್ ತೀರ್ಪು ನಮ್ಮ ಸಂಸ್ಕೃತಿಗೆ ವಿರುದ್ಧವಾದದ್ದು ಎಂದು ಹೇಳುತ್ತಿದ್ದೀರೆ. ಆದರೆ ಇದೇ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ಬಗ್ಗೆ ತೀರ್ಪು ನೀಡಿದ್ದಾಗ ಸಂತಸ ಮತ್ತು ಪ್ರಶಂಸೆ ವ್ಯಕ್ತಪಡಿಸಿದ್ದಿರಿ. ಶಬರಿಮಲೆ ವಿವಾದ ನಿಮ್ಮ ಸಂಸ್ಕೃತಿಯಾದರೆ, ತ್ರಿವಳಿ ತಲಾಖ್ ಅವರ ಸಂಸ್ಕೃತಿ ಎಂದು ಹೇಳಿದ್ದಾರೆ.
ಅಂತೆಯೇ ಶಬರಿಮಲೆ ವಿವಾದವನ್ನು ಹಿಂದೂ ನವೋದಯ ಮತ್ತು ಗೊಡ್ಡುತನದ ನಡುವಿನ ಹೋರಾಟ ಎಂದು ಸ್ವಾಮಿ ವ್ಯಾಖ್ಯಾನಿಸಿದ್ದಾರೆ. ಹಿಂದೂ ನವೋದಯದಾರರು ಹೇಳುತ್ತಾರೆ ಎಲ್ಲ ಹಿಂದೂಗಳೆಲ್ಲರೂ ಒಂದೇ. ಎಲ್ಲ ಜಾತಿ ಮತ್ತು ಪಂಗಡಗಳೂ ಸಮಾನವಾದದ್ದು. ಬ್ರಾಹ್ಮಣರು ಇಂದು ಬೌದ್ಧಿಕರಾಗಿ ಉಳಿದಿಲ್ಲ. ಅವರು ಸಿನಿಮಾ, ವಾಣಿಜ್ಯ ಸೇರಿದಂತೆ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಜಾತಿ ಎಂಬುದು ಜನ್ಮದಿಂದ ನಿರ್ಧಾರವಾಗುತ್ತದೆ ಎಂಬುದನ್ನು ಎಲ್ಲಿ ಬರೆಯಲಾಗಿದೆ. ಶಾಸ್ತ್ರಗಳನ್ನೂ ತಿದ್ದುಪಡಿಮಾಡಬಹುದು ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics