ದೇಶ

ರಾಫೆಲ್ ವಿವಾದ: ಎಫ್ ಐಆರ್ ದಾಖಲಿಸುವಂತೆ ಸುಪ್ರೀಂ ಮೊರೆ ಹೋದ ಶೌರಿ, ಭೂಷಣ್, ಸಿನ್ಹಾ!

Srinivasamurthy VN
ನವದೆಹಲಿ: ದೇಶದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿರುವ ಬಹುಕೋಟಿ ರಾಫೆಲ್ ಜೆಟ್ ಯುದ್ಧ ವಿಮಾನ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಿಸುವಂತೆ ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ, ಸಾಮಾಜಿಕ ಹೋರಾಟಗಾರರಾದ ಅರುಣ್ ಶೌರಿ ಮತ್ತು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಪ್ರಕರಣದಲ್ಲಿ ಕೇಳಿಬಂದಿರುವ ಸರ್ಕಾರದಿಂದ 'ಕ್ರಿಮಿನಲ್ ದುರುಪಯೋಗ' ಆರೋಪದ ಕುರಿತು ಎಫ್ ಐಆರ್ ದಾಖಲಿಸುವಂತೆ ಮನವಿ ಮಾಡಲಾಗಿದ್ದು, ಈ ಸಂಬಂಧ ಬುಧವಾರ ಪ್ರಶಾಂತ್ ಭೂಷಣ್ ನೇತೃತ್ವದಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಅಂತೆಯೇ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿದ್ದು, ಈ ವರೆಗೂ ನಡೆದಿರುವ ತನಿಖೆಯ ಸ್ಥಿತಿಗತಿ ವರದಿ ನೀಡುವಂತೆ ಸಿಬಿಐ ಸಂಸ್ಥೆಗೆ ಸೂಚಿಸಬೇಕು ಎಂದು ಪ್ರಶಾಂತ್ ಭೂಷಣ್ ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಅಕ್ಟೋಬರ್ 4ರಂದು ದೂರು ದಾಖಲಾಗಿದ್ದು, ಪ್ರಸ್ತುತ ಕಡ್ಡಾಯ ರಜೆಯಲ್ಲಿರುವ ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ ಅಂದು ದೂರು ಸ್ವೀಕರಿಸಿದ್ದರು. ಇದೀಗ ಹಂಗಾಮಿ ನಿರ್ದೇಶಕರಾಗಿ ರಾಕೇಶ್ ಅಸ್ಛಾನಾ ಅವರು ಜವಾಬ್ದಾರಿ ವಹಿಸಿಕೊಂಡಿದ್ದು, ಕೋರ್ಟ್ ಅವರ ನೇತೃತ್ವದಲ್ಲೇ ವರದಿ ಸಲ್ಲಿಕೆಯಾಗುವ ಸಾಧ್ಯತೆ ಇದೆ.
SCROLL FOR NEXT