ಪಣಜಿ: ಅನಾರೋಗ್ಯದಿಂದಾಗಿ ಗೈರು ಹಾಜರಾಗಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಮುಂದಿನ ನವೆಂಬರ್ ತಿಂಗಳಿನಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆಂದು ಬಿಜೆಪಿ ಬುಧವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಗೋವಾ ಬಿಜೆಪಿ ಅಧ್ಯಕ್ಷ ವಿನಯ್ ತೆಂಡುಲ್ಕರ್ ಅವರು, ಪರಿಕ್ಕರ್ ಅವರ ಆರೋಗ್ಯ ಇದೀಗ ಸುಧಾರಿಸುತ್ತಿದ್ದು, ಮುಂದಿನ ತಿಂಗಳು ತಮ್ಮ ಕಚೇರಿಗೆ ಮರಳಲಿದ್ದಾರೆಂದು ಹೇಳಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ರಾಜ್ಯ ಮಟ್ಟದಲ್ಲಿ ಯಾವುದೇ ರೀತಿಯ ಮಾತುಕತೆಗಳೂ ನಡೆದಿಲ್ಲ. ನಾಯಕತ್ವ ಬದಲಿಸುವ ಕುರಿತು ಮಾತುಕತೆ ನಡೆಸುವ ಹಕ್ಕು ನಮಗಿಲ್ಲ. ಈ ಬಗ್ಗೆ ದೆಹಲಿಯಲ್ಲಿರುವ ಪಕ್ಷಹ ಹಿರಿಯ ನಾಯಕರು ನಿರ್ಧಾರ ಕೈಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ.