ಪ್ರಧಾನಿ ಮೋದಿ ಡೆಂಘೀ ಸೊಳ್ಳೆಯಿದ್ದಂತೆ, ಅವರಿಂದ ಎಲ್ಲರೂ ಕಾಯಿಲೆ ಬೀಳುತ್ತಿದ್ದಾರೆ: ಕಾಂಗ್ರೆಸ್ ಶಾಸಕಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಡೆಂಘೀ ಸೊಳ್ಳೆಯಿದ್ದಂತೆ, ಅವರಿಂದ ಎಲ್ಲರೂ ಕಾಯಿಲೆಗೆ ಬೀಳುತ್ತಿದ್ದಾರೆಂದು ಮಹಾರಾಷ್ಟ್ರ ಕಾಂಗ್ರೆಸ್ ಶಾಸಕಿ ಪ್ರಣೀತಿ ಶಿಂಧೆಯವರು ಶನಿವಾರ ಹೇಳಿದ್ದಾರೆ...
ಮುಂಬೈ: ಪ್ರಧಾನಮಂತ್ರಿ ನರೇಂದ್ರ ಮೋದಿ ಡೆಂಘೀ ಸೊಳ್ಳೆಯಿದ್ದಂತೆ, ಅವರಿಂದ ಎಲ್ಲರೂ ಕಾಯಿಲೆಗೆ ಬೀಳುತ್ತಿದ್ದಾರೆಂದು ಮಹಾರಾಷ್ಟ್ರ ಕಾಂಗ್ರೆಸ್ ಶಾಸಕಿ ಪ್ರಣೀತಿ ಶಿಂಧೆಯವರು ಶನಿವಾರ ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದಲ್ಲಿ ಮಾತನಾಡಿರುವ ಮಹಾರಾಷ್ಟ್ರ ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆ ಪುತ್ರಿ ಹಾಗೂ ಮಹಾರಾಷ್ಟ್ರದ ಸೊಲ್ಲಾಪು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಪ್ರಣೀತಿ ಶಿಂಧೆಯವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಡೆಂಘೀ ಸೊಳ್ಳೆಗೆ ಹೋಲಿಕೆ ಮಾಡಿದ್ದಾರೆ.
ನಮ್ಮ ದೇಶದಲ್ಲಿ ಹೊಸ ಡೆಂಘೀ ಸೊಳ್ಳೆಯೊಂದು ಕಾಣಿಸಿಕೊಂಡಿದೆ. ಅದರ ಹೆಸರು ಮೋದಿ ಬಾಬಾ. ಈ ಸೊಳ್ಳೆಯಿಂದ ಎಲ್ಲರೂ ಕಾಯಿಲೆಗೆ ಬೀಳುತ್ತಿದ್ದಾರೆ. ಹೀಗಾಗಿ ಕೀಟ ನಾಶಕ ಸಿಂಪಡಿಸಿ ಅದು ಅಧಿಕಾರಕ್ಕೆ ಬರದಂತೆ ತಡೆಯಿರಿ ಎಂದು ತಿಳಿಸಿದ್ದಾರೆ.
ಶಿಂಧೆಯವರ ಈ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರೇವ್ ಪಾರ್ಟಿ, ಸ್ಲೀವ್ ಲೆಸ್ ಬಟ್ಟೆ ಹಾಕುವವರಿಂದ ನಾವು ಈ ಮಾತು ಕೇಳಬೇಕಿಲ್ಲ ಎಂದಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.