ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಬಿಜೆಪಿ ರಾಮಮಂದಿರ ಕುರಿತು ಸುಗ್ರೀವಾಜ್ಞೆ ಹೊರಡಿಸಲಿ: ಓವೈಸಿ ಸವಾಲು

ಅಯೋಧ್ಯೆಯಲ್ಲಿ ರಾಮಮಂದಿರ ಸ್ಥಾಪನೆ ಕುರಿತು ಭಾರತೀಯ ಜನತಾ ಪಕ್ಷ, ಸುಗ್ರೀವಾಜ್ಞೆ ಹೊರಡಿಸಲಿ ಎಂದು ಆಲ್ ಇಂಡಿಯನ್ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ)....

ಅಸಾದುದ್ದೀನ್ ಓವೈಸಿ
Raghavendra Adiga
Updated On : 29 Oct 2018, 3:35 am
ಹೈದರಾಬಾದ್: ಅಯೋಧ್ಯೆಯಲ್ಲಿ ರಾಮಮಂದಿರ ಸ್ಥಾಪನೆ ಕುರಿತು ಭಾರತೀಯ ಜನತಾ ಪಕ್ಷ, ಸುಗ್ರೀವಾಜ್ಞೆ ಹೊರಡಿಸಲಿ ಎಂದು ಆಲ್ ಇಂಡಿಯನ್ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಪಕ್ಷದ ಅಧ್ಯಕ್ಷ  ಅಸಾದುದ್ದೀನ್ ಓವೈಸಿ ಸವಾಲೆಸೆದಿದ್ದಾರೆ.
"ರಾಮಮಂದಿರದ ಕುರಿತು ಸುಗ್ರೀವಾಜ್ಞೆ ತರಲು ಬಿಜೆಪಿ ಏಕೆ ಹಿಂದೇಟು ಹಾಕುತ್ತಿದೆ? ಅವರು ಸುಗ್ರೀವಾಜ್ಞೆ  ತರಲಿ, ಅವರು ಪ್ರತಿ ಬಾರಿ ಇದನ್ನೇ ಹೇಳುತ್ತಾ ಬಂದಿದ್ದಾರೆ. ಹಾಗೆ ಅವರು ಬೆದರಿಕೆಯೊಡ್ಡುತ್ತಾ ಬಂದಿದ್ದಾರೆ.ಬಿಜೆಪಿ, ಆರ್.ಎಸ್.ಎಸ್., ವಿಎಚ್ಪಿ ಗಳವರು ಪ್ರತಿ ಬಾರಿ ಇದನ್ನೇ ಪುನರಾವರ್ತಿಸುತ್ತಾರೆ.ಈಗ ಅವರು ಹಾಗೆ ಮಾಡಿ ತೋರಿಸಲಿ, ಹಾಗೆಂದು ನಾನು ಅವರಿಗೆ ಸವಾಲು ಎಸೆಯುತ್ತೇನೆ." ಓವೈಸಿ ಹೇಳಿದ್ದಾರೆ.
ಇಂದು ಸುಪ್ರೀಂ ಕೋರ್ಟ್ಅಯೋಧ್ಯೆ ವಿವಾದ ಕುರಿತ ವಿಚಾರಣೆಯನ್ನು ಜನವರಿ 2019 ರವರೆಗೆ ಮುಂದೂಡಿದೆ.

Advertisement

Advertisement

"ಪ್ರತಿ ಐದು ವರ್ಷಗಳಿಗೊಮ್ಮೆ ರಾಮಮಂದಿರ ಕುರಿತ ಪ್ರತಿಕ್ರಿಯೆ ಸಾಮಾನ್ಯವಾಗಿದ್ದು ಬಿಜೆಪಿ ರಾಮಮಂದಿರ ಕುರಿತಂತೆ ಜನರ ಭಾವನೆ ಕೇಂದ್ರೀಕರಿಸಿಕೊಳ್ಳುತ್ತದೆ. ಕಾಂಗ್ರೆಸ್ ತಾನು ವಿವಾದವು ಸುಪ್ರೀಂ ಗೆ ಹೋಗುವ ಮುನ್ನವೇ ತನ್ನ ನಿರ್ಣಯವನ್ನು ಕೈಗೊಂಡಿತ್ತು. ಆದರೆ ಇದೀಗ ಎಲ್ಲರೂ ನ್ಯಾಯಾಲಯದ ಆದೇಶಕ್ಕೆ ತಲೆ ಬಾಗಲೇ ಬೇಕಿದೆ" ಕಾಂಗ್ರೆಸ್ ನಾಯಕ , ಮಾಜಿ ಹಣಕಾಸು ಸಚಿವರಾದ ಪಿ. ಚಿದಂಬರಂ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments