ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

'ನಾನೇ ಸೀನಿಯರ್ ರೌಡಿ, ನನಗೇ ಮೊದಲು ಟಿಕೆಟ್ ಕೊಡಿ': ವೈರಲ್ ಆಯ್ತು ಕಾಂಗ್ರೆಸ್ ಮುಖಂಡನ ಹೇಳಿಕೆ

ನಾನೇ ಸೀನಿಯರ್ ರೌಡಿ, ನನಗೇ ಮೊದಲು ಟಿಕೆಟ್ ಕೊಡಿ ರೌಡಿ ಶೀಟರ್ ಓರ್ವ ಆಗ್ರಹಿಸಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ರೌಡಿ ಶೀಟರ್ ಬಿಲ್ಲಾ ಸುಧೀರ್ ರೆಡ್ಡಿ
Srinivasa Murthy VN
Updated On : 30 Oct 2018, 8:52 am
ಹೈದರಾಬಾದ್: ನಾನೇ ಸೀನಿಯರ್ ರೌಡಿ, ನನಗೇ ಮೊದಲು ಟಿಕೆಟ್ ಕೊಡಿ ರೌಡಿ ಶೀಟರ್ ಓರ್ವ ಆಗ್ರಹಿಸಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ದಿನಕಳೆದಂತೆ ತೆಲಂಗಾಣ ವಿಧಾನಸಭೆ ಚುನಾವಣೆ ಕಣ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳ ಟಿಕೆಟ್ ಪಡೆಯಲು ಆಕಾಂಕ್ಷಿಗಳು ಹರ ಸಾಹಸ ಪಡುತ್ತಿದ್ದಾರೆ. ಅವಧಿಗೂ ಮುನ್ನ ವಿಧಾನಸಭಾ ಚುನಾವಣೆ ಎದುರಿಸಲು ಸಜ್ಜಾಗಿರುವ ತೆಲಂಗಾಣದಲ್ಲಿ ಈಗ ಟಿಕೆಟ್ ಪಡೆಯಲು ನಾಯಕರು ಭಾರೀ ಪೈಪೋಟಿ ನಡೆಸುತ್ತಿದ್ದಾರೆ. ಸದ್ಯ ಹೈ ವೋಲ್ಟೆಜ್ ರಾಜಕೀಯ ರಣರಂಗವಾಗಿರುವ ತೆಲಂಗಾಣದಲ್ಲಿ ಟಿಕೆಟ್ ಪಡೆಯಲು ಮುಂದಾಗಿರುವ ಕಾಂಗ್ರೆಸ್‌ ನ ಮುಖಂಡನೋರ್ವ ನೀಡಿರುವ ಹೇಳಿಕೆ ವ್ಯಾಪಕ ವೈರಲ್ ಆಗಿದೆ. 
ಕಾಂಗ್ರೆಸ್ ಪಕ್ಷದ ಮುಖಂಡ ಎಂದು ಹೇಳಿಕೊಂಡಿರುವ ಬಿಲ್ಲಾ ಸುಧೀರ್ ರೆಡ್ಡಿ ಎಂಬಾತ, 'ತಾನು ಸೀನಿಯರ್ ರೌಡಿಯಾಗಿದ್ದು, ನನಗೆ ಟಿಕೆಟ್ ನೀಡಬೇಕು' ಎಂದು ಹಿರಿಯ ನಾಯಕರ ಮುಂದೆ ಬೇಡಿಕೆ ಇಟ್ಟಿದ್ದಾರೆ. ಗಂಭೀರ ಕ್ರಿಮಿನಲ್ ಅಪರಾಧ ಪ್ರಕರಣಗಳು ಈ ಬಿಲ್ಲಾ ಸುಧೀರ್ ರೆಡ್ಡಿ ಮೇಲೆ ಇದ್ದು, ಇದೇ ತಮ್ಮ ಧನಾತ್ಮಕ ಅಂಶಗಳು ಎಂಬಂತೆ ಸುಧೀರ್ ರೆಡ್ಡಿ ಮಾಧ್ಯಮಗಳ ಮುಂದೆ ಬಿಂಬಿಸಿಕೊಂಡಿದ್ದಾನೆ. 

Advertisement

Advertisement

'ಪಕ್ಷದಲ್ಲಿರುವ ರೌಡಿಗಳ ಹಿನ್ನಲೆಯನ್ನು ಪರಿಶೀಲಿಸಿ, ಆಗ ನಾನೆಷ್ಟು ಹಿರಿಯ ರೌಡಿ ಎಂಬುದು ನಿಮಗೆ ತಿಳಿಯಲಿದೆ. ಕಾಂಗ್ರೆಸ್ ಯಾರಾದರೂ ರೌಡಿ ಶೀಟರ್‌ ಅನ್ನು ಆಯ್ಕೆ ಮಾಡಿದರೆ, ಅದು ನಾನೇ ಆಗಬೇಕು. ನಾನು ಈಗಾಗಲೇ ಅಪಹರಣ ಹಿಂಸೆ, ಗಲಭೆ, ಕಿರುಕುಳ, ಅವ್ಯವಹಾರದಂತಹ ಪ್ರಕರಣಗಳು ನನ್ನ ಮೇಲಿದೆ. ಆದರೆ ನಾನು ಯಾವುದೇ ಕುಟುಂಬಕ್ಕೆ ಹಾನಿ ಮಾಡಿಲ್ಲ. ಪಕ್ಷಕ್ಕಾಗಿ ನಿಷ್ಟಾವಂತನವಾಗಿ ದುಡಿದಿದ್ದೇನೆ. ಪಕ್ಷದ ನಾಯಕರು ಜಂಗ ರಾಘವ್ ರೆಡ್ಡಿ ಅವರನ್ನು ಆಯ್ಕೆ ಮಾಡಿದ್ದಾರೆ. ಆತನಂತೆ ನಾನು ಕೊಲೆ ಮಾಡಿಲ್ಲ. ಆತ ಇನ್ನು ಜ್ಯೂನಿಯರ್ ರೌಡಿ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.
ಅಷ್ಟೇ ಅಲ್ಲದೇ ಕಾಂಗ್ರೆಸ್ ನನ್ನ ಮೇಲೆ ರೌಡಿ ಶೀಟ್ ಇದೆ ಎಂಬ ಕಾರಣಕ್ಕೆ ನನ್ನನ್ನು ವಿರೋಧಿಸುತ್ತಿದೆ. ಆದರೆ ನಾನು ಪಕ್ಷಕ್ಕಾಗಿಯೇ ರೌಡಿ ಆಗಿರುವುದು ಎಂದು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement