ದೇಶ

ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಲಿರುವ ಕೇರಳ ಸಿಎಂ ಪಿಣರಾಯಿ ವಿಜಯನ್

Srinivas Rao BV
ತಿರುವನಂತಪುರಂ: ವೈದ್ಯಕೀಯ ಚಿಕಿತ್ಸೆಗಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಮೆರಿಕಾಗೆ ತೆರಳುತ್ತಿದ್ದಾರೆ. 
ಪತ್ನಿ ಕಮಲಾ ವಿಜಯನ್ ಪಿಣರಾಯಿ ವಿಜಯನ್ ಜೊತೆಗಿರಲಿದ್ದಾರೆ. ಚಿಕಿತ್ಸೆ ಪಡೆಯುವುದಕ್ಕಾಗಿ ಪಿಣರಾಯಿ ವಿಜಯನ್ ಅವರು ಆ.19 ರಂದೇ ಅಮೆರಿಕಾಗೆ ತೆರಳಬೇಕಿತ್ತು. ಆದರೆ ಅತಿ ಹೆಚ್ಚು ಮುಂಗಾರು ಮಳೆ ಬಂದಿದ್ದರಿಂದ ಪ್ರಯಾಣವನ್ನು ಮುಂದೂಡಲಾಗಿತ್ತು. ಸರ್ಕಾರದ ಮೂಲಗಳ ಪ್ರಕಾರ ತಿಂಗಳಾಂತ್ಯಕ್ಕೆ ವಿಜಯನ್ ವಾಪಸ್ಸಾಗಲಿದ್ದಾರೆ. 
SCROLL FOR NEXT