ದೇಶ

ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂಗೆ ರಾಂಚಿ ಆಸ್ಪತ್ರೆಯಲ್ಲಿ ಸೊಳ್ಳೆ, ನಾಯಿ ಕಾಟ!

Raghavendra Adiga
ರಾಂಚಿ: ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖಂಡ ಲಾಲು ಪ್ರಸಾದ್ ಯಾದವ್ ಜೈಲು ಶಿಕ್ಷೆಗೆ ಗುರಿಯಾಗಿದ್ದು ಇದೀಗ ಅನಾರೋಗ್ಯದ ಕಾರಣ ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
ಆದರೆ ಅವರಿರುವ ವಾರ್ಡ್ ಸುತ್ತ ನೈರ್ಮಲ್ಯದ ಕೊರತೆ ಇದ್ದು ಸೊಳ್ಳೆಗಳ ಕಾಟವಿದೆ, ಬೀದಿ ನಾಯಿಗಳ ಬೊಗಳುವಿಕೆ ಅವರಿಗೆ ತೊಂದರೆ ಉಂಟುಮಾಡಿದೆ ಹೀಗಾಗಿ ತಮಗೆ ಬೇರೆ ವಾರ್ಡ್ ನಿಡಬೇಕೆಂದು ಲಾಲೂ ಪ್ರಸಾದ್ ಆಸ್ಪತ್ರೆಯ ವೈದ್ಯರಲ್ಲಿ ಮನವಿ ಮಾಡಿದ್ದಾರೆ.
ಲಾಲೂ  ಅವರ ಕೋರಿಕೆಯನ್ನು ಜೈಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು .ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಆರ್.ಕೆ.ಶ್ರೀವಾಸ್ತವ್ ತಿಳಿಸಿದ್ದಾರೆ
"ನಾಯಿಗಳ ಬೊಗಳುವಿಕೆಯಿಂದ ಲಾಲೂ ಪ್ರಸಾದ್ ಅವರಿಗೆ ತೊಂದರೆಯಾಗುವುದಾಗಿ ಹೇಳಿದ್ದಾರೆ. ನಾವು ಅವರ ಮನವಿಯನ್ನು ಜೈಲು ಅಧಿಕ್ರಿಗಳಿಗೆ ಕಳಿಸಿದ್ದು ಆಸ್ಪತ್ರೆಯ ಸುತ್ತಮುತ್ತಲ ಪ್ರದೇಶಗಳಿಂದ ಬೀದಿ ನಾಯಿಗಳನ್ನು ದೂರ ವಿರಿಸಬೇಕೆಂದು ಅದರಲ್ಲಿ ಮನವಿ ಮಾಡಿದ್ದೇವೆ." ಅವರು ಹೇಳಿದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲೂ ಪ್ರಸಾದ್ ತಮಗೆ ನಾಯಿ ಬೊಗಳುವ ಕಾರಣ ರಾತ್ರಿ ನಿದ್ರೆಗೆ ಅಡಚಣೆಯಾಗಿದೆ, ಶೌಚಾಲಯ ದುರ್ವಾಸನೆಯಿಂದ ಕೂಡಿದೆ, ಸೊಳ್ಳೆಗಳ ಕಾಟವಿದೆ ಎಂದು ದೂರಿದ್ದಾರೆ. ಅವರು ತಮ್ಮನ್ನು ಸೂಪರ್ ಸ್ಪೆಷಾಲಿಟಿ ವಾರ್ಡ್ ನಿಂದ ಬೇರೆ ವಾರ್ಡ್ ಗೆವರ್ಗಾಯಿಸಲು ಮನವಿ ಮಾಡಿದ್ದಾರೆ.
ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಎದೆ ನೋವು ಮತ್ತು ಹಿಮೋಗ್ಲೋಬಿನ್ ಕೊರತೆಯ ಕಾರಣದಿಂದ ಬಳಲುತ್ತಿದ್ದು ಆಗಸ್ಟ್ 25 ಕ್ಕೆ ಮುಂಬೈ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.
ಬಹುಕೋಟಿ ಮೇವು ಹಗರಣದ ನಾಲ್ಕು ಪ್ರಕರಣಗಳಲ್ಲಿ ಲಾಲು ಶಿಕ್ಷೆಗೆ ಗುರಿಯಾಗಿದ್ದಾರೆ.
SCROLL FOR NEXT