ದೇಶ

ಜೆಎನ್ ಯು ಚುನಾವಣೆ: ಎನ್ ಎಸ್ ಯಐ ಅಭ್ಯರ್ಥಿ ನಾಮಪತ್ರ ರದ್ದುಗೊಳಿಸಲು ಚುನಾವಣಾ ಆಯೋಗ ನಕಾರ

Shilpa D
ನವದೆಹಲಿ: ಜವಹರ್ ಲಾಲ್ ನೆಹರು ವಿವಿಯ ವಿದ್ಯಾರ್ಥಿ ಸಂಘದ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಎನ್ ಎಸ್ ಯು ಐ ಅಭ್ಯರ್ಥಿ ನಾಮಪತ್ರವನ್ನು ರದ್ದುಗೊಳಿಸಲಾಗದು ಎಂದು ಚುನಾವಣಾ ಆಯೋಗ ತಿಳಿಸಿದೆ.
ವಿವಿಯ ಕುಂದುಕೊರತೆ ಪರಿಹಾರ ಸಮಿತಿಯು ಎನ್ ಎಸ್ ಯು ಐ  ಅಭ್ಯರ್ಥಿ ವಿಕಾಸ್ ಯಾದವ್ ಅವರ ನಾಮಪತ್ರ ರದ್ದುಗೊಳಿಸಬೇಕು ಎಂದು ಶಿಫಾರಸ್ಸು ಮಾಡಿತ್ತು, ಆದರೆ  ಯಾವುದೇ ಕಾರಣಕ್ಕೂ ನಾಮಪತ್ರ ರದ್ದುಗೊಳಿಸುವುದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟ ಪಡಿಸಿದೆ.
ಸೆಪ್ಟಂಬರ್ 6 ರಂದು ನಾಮಪತ್ರ ರದ್ದಾಗಿದೆ ಎಂದು ವಿಕಾಸ್ ಯಾದವ್ ಅವರಿಗೆ ಜಎನ್ ಯು ವಿದ್ಯಾರ್ಥಿ ಕಲ್ಯಾಣ ಕಚೇರಿ ತಿಳಿಸಿತ್ತು, ಈ ಹಿಂದೆ ವಿಕಾಸ್ ಯಾದವ್ ವಿರುದ್ದ ಪ್ರಕರಣದ ವಿಚಾರಣೆ ನಡೆದು 20ಸಾವಿರ ದಂಡ ವಿಧಿಸಿ ಹಾಸ್ಟೆಲ್ ಬದಲಾವಣೆ ಮಾಡಲಾಗಿತ್ತು, ಹೀಗಾಗಿ ನಾಮಪತ್ರ ರದ್ದಾಗಿದೆ ಎಂದು ಜೆಎನ್ ಯು ಡೀನ್ ತಿಳಿಸಿದ್ದರು.
ಆದರೆ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಯಾದವ್ ಸವಾಲು ಹಾಕಿದ್ದರು, ಜಎನ್ ಯು ಪ್ರಾಧಿಕಾರ ಯಾದವ್ ವಿರುದ್ಧ ತನಿಖೆ ನಡೆಸಿತ್ತು. ಜೆಎನ್ ಯು ಎಸ್ ಯಿ ಚುನಾವಣೆಗೆ ಶುಕ್ರವಾರ ದಿನಾಂಕ ನಿಗದಿಯಾಗಿದೆ.
SCROLL FOR NEXT