ದೇಶ

ವಿಘ್ನವಿನಾಶಕ ಗಣಪತಿಗಾಗಿ ಬರೋಬ್ಬರಿ 126 ಕೆಜಿ ತೂಕದ ಬೃಹತ್ ಮೋದಕ...!

Manjula VN
ಪುಣೆ: ದೇಶದಾದ್ಯಂತ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಇನ್ನೂ ಮುಗಿದಿಲ್ಲ. ಸಾಮಾನ್ಯವಾಗಿ ಅತಿ ಎತ್ತರದ ಗಣೇಶ ಮೂರ್ತಿ ಸಿದ್ಧಪಡಿಸಿರುವುದು, ಅತೀ ತೂಕದ ಲಾಡುಗಳನ್ನು ತಯಾರು ಮಾಡಿ ಗಣೇಶನಿಗೆ ವೈದ್ಯಕ್ಕಿಟ್ಟಿರುವುದನ್ನು ನೋಡಿರುತ್ತೇವೆ. ಆದರೆ, ಇಲ್ಲೊಂದೆಡೆ ಬೃಹತ್ ಕೆಜಿಯ ಮೋದಕವನ್ನು ಗಣಪನಿಗೆ ಅರ್ಪಿಸಿದ್ದಾರೆ. 
ಮಹಾರಾಷ್ಟ್ರದ ಪುಣೆಯಲ್ಲಿಹುವ ದಗದುಷೆತ್ ಹಲ್ವಾಯಿ ಗಣಪತಿ ದೇಗುಲಕ್ಕೆ ಅರ್ಪಿಸಲು ಬರೋಬ್ಬರಿ 126 ಕೆಜಿ ತೂಕದ ಮೋದಕವನ್ನು ತಯಾರಿಸಲಾಗಿದೆ. 
ಒಣ ಹಣ್ಣುಗಳು (ಡ್ರೈಫ್ರೂಟ್ಸ್) ಮತ್ತು ಬೆಳ್ಳಿ ಎಲೆಗಳಿಂದ ಈ ಬೃಹತ್ ಮೋದಕವನ್ನು ತಯಾರಿಸಲಾಗಿದ್ದು, ಈ ಬೃಹತ್ ಗಾತ್ರದ ಮೋದಕ ಭಕ್ತರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. 
 ಗಣೇಶ ಹಬ್ಬದ ದಿನದಂದು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಭಕ್ತಿಯಿಂದ ಪೂಜಿಸಲಾಗುತ್ತದೆ. ಗಣಪನಿಗೆ ಮೋದಕ ಪ್ರಿಯವಾದ ಪದಾರ್ಥವಾಗಿದೆ. ಹೀಗಾಗಿಯೇ ಗಣೇಶ ಚತುರ್ಥಿಯಂದು ಪ್ರಮುಖ ಖಾದ್ಯವಾಗಿ ಎಲ್ಲೆಡೆ ಮೋದಕವನ್ನು ತಯಾರಿಸಲಾಗುತ್ತದೆ. 
SCROLL FOR NEXT