'2047 ರ ವೇಳೆಗೆ ಭಾರತ ಮತ್ತೆ ಇಬ್ಭಾಗವಾಗಲಿದೆ!?' 
ದೇಶ

'2047 ರ ವೇಳೆಗೆ ಭಾರತ ಮತ್ತೆ ಇಬ್ಭಾಗವಾಗಲಿದೆ!?'

2047 ರ ವೇಳೆಗೆ ಭಾರತ ಮತ್ತೆ ಇಬ್ಭಾಗವಾಗಲಿದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನವದೆಹಲಿ: 2047 ರ ವೇಳೆಗೆ  ಭಾರತ ಮತ್ತೆ ಇಬ್ಭಾಗವಾಗಲಿದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 
1947 ರಲ್ಲಿ ಭಾರತ ಧಾರ್ಮಿಕ ಆಧಾರದಲ್ಲಿ ಇಬ್ಭಾಗಗೊಂಡಿತ್ತು,  72 ವರ್ಷಗಳಲ್ಲಿ ದೇಶದ ಜನಸಂಖ್ಯೆ 33 ಕೋಟಿಯಿಂದ 135.7 ಕೋಟಿಗೆ ಏರಿಕೆಯಾಗಿದೆ ಎಂದಿರುವ ಸಚಿವರು ಯಾವುದೇ ಸಮುದಯವನ್ನು ಹೆಸರಿಸದೇ ಹೇಳಿಕೆ ನೀಡಿದ್ದು, ವಿಧ್ವಂಸಕ ಶಕ್ತಿಗಳ ಜನಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಭಯಾನಕವಾಗಿದೆ ಎಂದು ಟ್ವಿಟರ್ ನಲ್ಲಿ ಬರೆದಿದ್ದಾರೆ. 
ಜಮ್ಮು-ಕಾಶ್ಮೀರದ ಸ್ಥಳೀಯ ನಿವಾಸಿಗಳಿಗೆ ವಿಶೇಷ ಸೌಲಭ್ಯ, ಹಕ್ಕುಗಳನ್ನು ನೀಡುವ ಆರ್ಟಿಕಲ್ 35ಎ ಬಗ್ಗೆಯೂ ಉಲ್ಲೇಖಿಸಿರುವ ಕೇಂದ್ರ ಸಚಿವರು, 1947 ರಲ್ಲಿ ಭಾರತ ಧಾರ್ಮಿಕ ಆಧಾರದಲ್ಲಿ ಇಬ್ಭಾಗವಾಯಿತು. 2047 ರಲ್ಲಿ ಇಂತಹದ್ದೇ ಘಟನೆ ಮತ್ತೊಮ್ಮೆ ನಡೆಯಲಿದೆ, ಮುಂದೆ ಭಾರತಕ್ಕೆ ಬರುವ ಸ್ಥಿತಿಯನ್ನು ಹೇಳುವುದಕ್ಕೂ ಸಾಧ್ಯವಿಲ್ಲ ಎಂದು ಗಿರಿರಾಜ್ ಸಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್

3rd T20I: ಆಲೌಟ್ ನಲ್ಲೂ ವಿಚಿತ್ರ ದಾಖಲೆ ಬರೆದ ಟೀಂ ಇಂಡಿಯಾ!

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು

3rd T20I: ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್, ವಿಂಡೀಸ್ ಗೆ ಗೆಲ್ಲಲು 224 ರನ್ ಗುರಿ ನೀಡಿದ ಭಾರತ