ದೇಶ

ಕೇರಳ ಸನ್ಯಾಸಿನಿ ಅತ್ಯಾಚಾರ ಪ್ರಕರಣ: ಹುದ್ದೆ ತ್ಯಜಿಸಲು ಸಿದ್ಧ ಎಂದ ಬಿಷಪ್ ಫ್ರಾಂಕೊ

Manjula VN
ಜಲಂಧರ್: ಕೇರಳ ರಾಜ್ಯದ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ನಡೆಸಿರುವ ಆರೋಪ ಎದುರಿಸುತ್ತಿರುವ ಜಲಂಧರ್'ನ ರೋಮನ್ ಕ್ಯಾಥೋಲಿಕ್ ಬಿಷಪ್ ಅವರು, ತಾತ್ಕಾಲಿಕವಾಗಿ ಹುದ್ದೆ ತ್ಯಜಿಸಲು ಸಿದ್ಧ ಎಂದು ಭಾನುವಾರ ಹೇಳಿದ್ದಾರೆ. 
ಈ ಕುರಿತು ಪೋಪ್ ಫ್ರಾನ್ಸಿಸ್ ಅವರಿಗೆ ಪತ್ರ ಬರೆದಿರುವ ಫ್ರಾಂಕೋ, ನ್ಯಾಯಾಲಯದ ಅಭಿಪ್ರಾಯ ಹಿನ್ನಲೆಯಲ್ಲಿ ತಮ್ಮನ್ನು ಆಡಳಿತದಿಂದ ತಾತ್ಕಾಲಿಕವಾಗಿ ತೆರವುಗೊಳಿಸುವಂತೆ ಮನವಿ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. 
ಅತ್ಯಾಚಾರ ಆರೋಪ ಎದುರಿಸುತ್ತಿರುವ ಬಿಷಪ್ ಅವರನ್ನು ಬಂಧನಕ್ಕೊಳಪಡಿಸಬೇಕೆಂದು ಆಗ್ರಹಿರಿ ಕಲೆದ ಒಂದು ವಾರದಿಂದ ಕೇರಳದ ಕೊಚ್ಚಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಐವರು ಸನ್ಯಾಸಿಯರು ನಡೆಸುತ್ತಿರುವ ಈ ಪ್ರತಿಭಟನೆಗೆ ಅನೇಕ ಚರ್ಚ್ ಗಳು ಬೆಂಬಲ ನೀಡಿವೆ. 
ಇದರ ಬೆನ್ನಲ್ಲೇ ಬಿಷಪ್ ಫ್ರಾಂಕೊ ಅವರು ಮುಲ್ಲಕಲ್ ಚರ್ಚ್ ಜವಾಬ್ದಾರಿಯನ್ನು ಫಾ.ಮ್ಯಾಥ್ಯೂ ಕೊಕ್ಕಂಡ ಅವರಿಗೆ ಹಸ್ತಾಂತರಿಸಿದ್ದರು. ತನಿಖಾ ತಂಡದ ಬಿಷಪ್ ಅವರು ಸೆ.19 ರಂದು ವಿಚಾರಣೆಗೆ ಹಾಜರಾಗಬೇಕಿದ್ದು, ಈ ಹಿನ್ನಲೆಯಲ್ಲಿ ಫ್ರಾಂಕ್ ಈ ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದುಬಂದಿದೆ. 
SCROLL FOR NEXT