ಸಾಂದರ್ಭಿಕ ಚಿತ್ರ 
ದೇಶ

ಜಮ್ಮು-ಕಾಶ್ಮೀರ: ಬಿಎಸ್ಎಫ್ ಯೋಧನ ಕತ್ತು ಸೀಳಿ ಪಾಕಿಸ್ತಾನ ಪಡೆಗಳ ಉದ್ಘಟತನ; ಗಡಿಯಲ್ಲಿ ಕಟ್ಟೆಚ್ಚರ

ಜಮ್ಮು ಬಳಿಯ ಅಂತಾರಾಷ್ಟ್ರೀಯ ಗಡಿ ಬಳಿ ಬಿಎಸ್ ಎಫ್ ಯೋಧರೊಬ್ಬರ ಕತ್ತನ್ನು ಬರ್ಬರವಾಗಿ ಸೀಳಿ ಕ್ರೌರ್ಯ ಪ್ರದರ್ಶಿಸಿದ್ದಾರೆ. ಈ ಘಟನೆ ಉಭಯ ದೇಶಗಳ ನಡುವೆ ಆಕ್ರೋಶ ಭುಗಿಲೆಳುವಂತೆ ಮಾಡಿದೆ.

ಜಮ್ಮು: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದ ಸೈನಿಕರ ಪುಂಡಾಟಿಕೆ ಮಿತಿ ಮೀರಿದೆ. ಅಂತಾರಾಷ್ಟ್ರೀಯ ಗಡಿ ಪ್ರದೇಶದ ಬಳಿ  ಬಿಎಸ್ ಎಫ್ ಯೋಧರೊಬ್ಬರ ಕತ್ತನ್ನು ಬರ್ಬರವಾಗಿ  ಸೀಳಿ ಕ್ರೌರ್ಯ ಪ್ರದರ್ಶಿಸಿದ್ದಾರೆ.  ಈ ಘಟನೆ ಉಭಯ ದೇಶಗಳ ನಡುವೆ ಆಕ್ರೋಶ ಭುಗಿಲೆಳುವಂತೆ ಮಾಡಿದೆ.
ರಾಮಗಢ ಸೆಕ್ಟರ್ ನಲ್ಲಿ  ನಿನ್ನೆ ದಿನ ಈ ಹೀನ ಕೃತ್ಯ ನಡೆದಿದ್ದು, ಅಂತಾರಾಷ್ಟ್ರೀಯ ಗಡಿ ವಲಯ ಹಾಗೂ ಗಡಿ ನಿಯಂತ್ರಣ ರೇಖೆಯಲ್ಲೆಡೆ   ಹೈ ಆಲರ್ಟ್ ಘೋಷಿಸಲಾಗಿದೆ. ಗಡಿ ಭದ್ರತಾ ಪಡೆ ಪಾಕಿಸ್ತಾನ ವಲಯದ ಸಹವರ್ತಿ ಪಡೆಯ ವಿರುದ್ಧ ಬಲವಾದ ದೂರನ್ನು ದಾಖಲಿಸಿದೆ.
ಗಸ್ತಿನಲ್ಲಿದ್ದ ಹೆಡ್ ಕಾನ್ಸ್ ಟೇಬಲ್  ನರೇಂದರ್ ಕುಮಾರ್   ಅವರ ಕತ್ತು ಸೀಳಿರುವುದಲ್ಲದೇ,  ದೇಹಕ್ಕೆ ಮೂರು ಬುಲೆಟ್ ಗಾಯಗಳಾಗವೆ. ಆದರೆ, ಘಟನೆ ನಡೆದು ಆರು ತಾಸು ಕಳೆದರೂ ಪಾಕಿಸ್ತಾನ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ.  ಬಿಎಸ್ ಎಫ್  ತಂಡದಿಂದ ಯಾವುದೇ ದಾಳಿ ನಡೆಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಪತ್ತೆಯಾಗಿದ್ದ ಯೋಧನ ಹುಡುಕಾಟ ನಡೆಸುತ್ತಿರಬೇಕಾದ್ದರೆ ಭಾರತದ ಬಿಎಸ್ ಎಫ್ ಯೋಧ ಕಂಡುಬಂದಿದ್ದು, ಈ ಪ್ರದೇಶದಲ್ಲಿ ಜಲ ವಿವಾದ ಏರ್ಪಟ್ಟಿದ್ದ ಹಿನ್ನೆಲೆಯಲ್ಲಿ ಸಮನ್ವಯ ಕ್ರಿಯೆಯಿಂದ ಆತನನ್ನು ಬರದಂತೆ ತಡೆಗಟ್ಟಲಾಗಿದೆ.ನಂತರ ಸೂರ್ಯಾಸ್ತವರೆಗೂ ಕಾಯ್ದು ಕಡು ಸಾಹಸದ ಮೂಲಕ ಪಾರ್ಥಿವ ಶರೀರವನ್ನು ಹೊರಗೆ ತರಲಾಗಿದೆ ಎಂದು ಪಾಕಿಸ್ತಾನದ ರೇಂಜರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

SCROLL FOR NEXT