ದೇಶ

ರಾಫೆಲ್ ಡೀಲ್ ಮೂಲಕ ಪ್ರಧಾನಿ ಭಾರತಕ್ಕೆ ದ್ರೋಹವೆಸಗಿದ್ದಾರೆ: ಹೊಲಾಂಡ್‌ ಹೇಳಿಕೆಗೆ ರಾಹುಲ್ ಪ್ರತಿಕ್ರಿಯೆ

Raghavendra Adiga
ನವದೆಹಲಿ: ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್‌ ಹೊಲಾಂಡ್‌ ರಾಫೆಲ್ ವಿವಾದ ಸಂಬಂಧ ಹೇಳಿಕೆ ನೀಡಿರುವುದಕ್ಕಾಗಿ ಅವರಿಗೆ ಧನ್ಯವಾದಗಳು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತಕ್ಕೆ ದ್ರೋಹ ಎಸಗಿದ್ದಾರೆ. ನಮ್ಮ ಸೈನಿಕರ ರಕ್ತವನ್ನು ಅವಮಾನಿಸಿದ್ದಾರೆ.ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ.
"ಮುಚ್ಚಿದ ಬಾಗಿಲುಗಳ ಹಿಂದೆ ರಾಫೆಲ್ ಒಪ್ಪಂದವನ್ನು ಪ್ರಧಾನಿ ಮೋದಿ ಬದಲಿಸಿದ್ದಾರೆ.ವೈಯಕ್ತಿಕ ಸಂಧಾನ ಹಾಗೂ ಮಾತುಕತೆ ಮೂಲಕ ಈ ಬದಲಾವಣೆ ಆಗಿದೆ.ಫ್ರಾಂಕೋಯಿಸ್‌ ಹೊಲಾಂಡ್‌ ಅವರಿಗೆ ಧನ್ಯವಾದಗಳು. ಪ್ರಧಾನಿ ಮೋದಿ ಅದಾಗಲೇ ದಿವಾಳಿಯಾಗಿದ್ದ ಅನಿಲ್ ಅಂಬಾನಿಗೆ ಶತಕೋಟಿ ಡಾಲರ್ ಮೌಲ್ಯದ ಒಪ್ಪಂದವನ್ನು ವಿತರಿಸಿದರು ಎನ್ನುವುದು ಅನಗೆ ಗೊತ್ತಿದೆ, ಪ್ರಧಾನಿ ಭಾರತಕ್ಕೆ ದ್ರೋಹ ಬಗೆದಿದ್ದಾರೆ.ಅವರು ನಮ್ಮ ಸೈನಿಕರ ರಕ್ತವನ್ನು ಅಪಹಾಸ್ಯ ಮಾಡಿದ್ದಾರೆ "ಗಾಂಧಿ ಟ್ವೀಟ್ ಮಾಡಿದ್ದಾರೆ
ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಭಾರತ ಅನಿಲ್ ಅಂಬಾನಿ ನೇತೃತ್ವದ ರಿಲಾಯನ್ಸ್ ಢಿಫೆನ್ಸ್ ಅನ್ನು ಆಯ್ಕೆ ಮಾಡಿತು. ಆದರೆ ಡಸ್ಸಾಲ್ಟ್ ಏವಿಯೇಷನ್ ಗೆ ಬೇರೆ ಆಯ್ಕೆ ಇರಲಿಲ್ಲ  ಎಂದು ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್‌ ಹೊಲಾಂಡ್‌ ಮಾಧ್ಯಮದ ಸಂದರ್ಶನವೊಂದರಲ್ಲಿನೀಡಿದ ಹೆಳಿಕೆಯ ಬೆನ್ನಲ್ಲಿ ರಾಹುಲ್ ಈ ಪ್ರತಿಕ್ರಿಯೆ ಬಂದಿದೆ.
SCROLL FOR NEXT