ಮಥುರಾ: ಹಸುವಿನ ಮೂತ್ರ (ಗಂಜಳ), ಸಗಣಿಯಿಂದ ತಯಾರಿಸಿದ ಸೋಪು, ಫೇಸ್ ಪ್ಯಾಕ್, ಶಾಂಪೂ ಹಾಗೂ ಔಷಧೀಯ ವಸ್ತುಗಳು ಶೀಘ್ರವೇ ಅಮೆಜಾನ್ ನಲ್ಲಿ ಸಿಗಲಿದೆ.
ಅರೆ ಇದು ಊಹೆಯಲ್ಲ ನಿಜ.. ಆರ್ಎಸ್ಎಸ್ ಬೆಂಬಲಿತ ಕೇಂದ್ರವೊಂದು ಈ ಬಗ್ಗೆ ಹೇಳಿಕೆ ನೀಡಿದ್ದು, ಅಂತಾರಾಷ್ಟ್ರೀಯ ಆನ್ ಲೈನ್ ಮಾರುಕಟ್ಟೆ ಅಮೇಜಾನ್ ನಲ್ಲಿ ಹಸುವಿನ ಮೂತ್ರ (ಗಂಜಳ), ಸಗಣಿಯಿಂದ ತಯಾರಿಸಿದ ಸೋಪು, ಫೇಸ್ ಪ್ಯಾಕ್, ಶಾಂಪೂ ಹಾಗೂ ಔಷಧೀಯ ವಸ್ತುಗಳು ದೊರೆಯಲಿವೆ ಎಂದು ಹೇಳಿದೆ.
ಮೂಲಗಳ ಪ್ರಕಾರ ಮಥುರಾದಲ್ಲಿರುವ ಆರ್ ಎಸ್ ಎಸ್ ಬೆಂಬಲಿಲಿತ ದೀನ್ ದಯಾಳ್ ಗೋ ಧಾಮ ಕೇಂದ್ರ ಇಂತಹುದೊಂದು ವಿನೂತನ ಕಾರ್ಯಕ್ಕೆ ಕೈಹಾಕಿದ್ದು, ಗೋಮೂತ್ರ, ಸಗಣಿಯಿಂದ ತಯಾರಿಸಲಾದ ಉತ್ಪನ್ನಗಳು, ವಿವಿಧ ತರಹದ ಬಟ್ಟೆಗಳನ್ನು ಅಮೇಜಾನ್ ನಲ್ಲಿ ಮಾರಾಟ ಮಾಡುವುದಾಗಿ ಹೇಳಿದೆ. ಇದಕ್ಕೂ ಮೊದಲು ಬೇರೆ ಬೇರೆ ವೆಬ್ ಸೈಟ್ ಗಳಲ್ಲಿ ಸಂಸ್ಥೆ ತನ್ನ ಪದಾರ್ಥಗಳನ್ನು ಮಾರಾಟ ಮಾಡುತ್ತಿತ್ತು. ಇನ್ನು ಮುಂದೆ ಅಮೇಜಾನ್ ನಲ್ಲಿಯೂ ವಸ್ತುಗಳು ಸಿಗುವಂತೆ ಮಾಡುತ್ತೇವೆ ಎಂದು ಹೇಳಿದೆ.
ಈ ಬಗ್ಗೆ ಮಾತನಾಡಿರುವ ಸಂಸ್ಥೆಯ ಮ್ಯಾನೇಜರ್ ಘನಾಶ್ಯಾಮ್ ಗುಪ್ತಾ ಅವರು, ನಾವು ಅಮೇಜಾನ್ ಸಂಸ್ಥೆಯೊಂದಿಗೆ ಕೆಲವು ದಿನಗಳ ಹಿಂದೆ ಚರ್ಚೆ ಮಾಡಿದ್ದೇವೆ. ಇನ್ನೊಂದು ವಾರದಲ್ಲಿ ನಮ್ಮ ಉತ್ಪನ್ನಗಳು ಅಮೆಜಾನ್ ಆನ್ಲೈನ್ ಸಂಸ್ಥೆಯಲ್ಲಿ ಸಿಗಲಿದೆ. ಜನರು ಅದನ್ನು ಸುಲಭವಾಗಿ ಪಡೆಯಬಹುದು ಎಂದು ತಿಳಿಸಿದ್ದಾರೆ. ಯಾವಾಗ ನಮ್ಮ ಕೇಂದ್ರದ ಉತ್ಪನ್ನಗಳ ಮಾರಾಟ ಶುರುವಾಗುತ್ತದೆ ಎಂಬುದನ್ನು ಅಮೆಜಾನ್ನವರು ತಿಳಿಸುತ್ತಾರೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics