ಪ್ರಧಾನಮಂತ್ರಿ ನರೇಂದ್ರ ಮೋದಿ 
ದೇಶ

ಸಿಕ್ಕಿಂಗೆ ಹೋಗುವ ಮಾರ್ಗದಲ್ಲಿ ಫೋಟೋಗ್ರಾಫರ್ ಆದ ಪ್ರಧಾನಿ ಮೋದಿ!

ನೂತನ ವಿಮಾನ ನಿಲ್ದಾಣವನ್ನು ಉದ್ಘಾಟಿಸುವ ಸಲುವಾಗಿ ಸಿಕ್ಕಿಂಗೆ ತೆರಳಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಫೋಟೋಗ್ರಾಫರ್ ಆಗಿದ್ದು, ತಾವು ತೆಗೆದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ...

ಗ್ಯಾಂಗ್ಟಕ್: ನೂತನ ವಿಮಾನ ನಿಲ್ದಾಣವನ್ನು ಉದ್ಘಾಟಿಸುವ ಸಲುವಾಗಿ ಸಿಕ್ಕಿಂಗೆ ತೆರಳಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಫೋಟೋಗ್ರಾಫರ್ ಆಗಿದ್ದು, ತಾವು ತೆಗೆದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 
ವಿಮಾನದ ಮೂಲಕ ಸಿಕ್ಕಿಂಗೆ ತಲುಪಿದ ಪ್ರಧಾನಿ ಮೋದಿಯವರು ಈ ವೇಳೆ ಕೆಲ ಅದ್ಭುತ ಫೋಟೋಗಳನ್ನು ತೆಗೆದಿದ್ದಾರೆ. ತಾವು ತೆಗೆದ ಫೋಟೋಗಳನ್ನು ಪ್ರಧಾನಿ ಮೋದಿಯವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಪೇಕಾಂಗ್ ಎಂಬಲ್ಲಿ ವಿಮಾನ ನಿಲ್ದಾನ ನಿರ್ಮಾಣವಾಗಿದ್ದು, ಸಿಕ್ಕಿಂ ಜನರಿಗೆ ಈ ವಿಮಾನ ನಿಲ್ದಾಣ ವರವಾಗಲಿದೆ. ರಾಜಧಾನಿ ಗ್ಯಾಂಗ್ಟಕ್ ನಿಂದ 33 ಕಿ.ಮೀ ದೂರವಿರುವ ಈ ವಿಮಾನ ನಿಲ್ದಾಣಕ್ಕೆ 2009ರಲ್ಲಿ ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ಶಂಕು ಸ್ಥಾಪನೆ ನೆರವೇರಿಸಿತ್ತು. 
201 ಎಕರೆ ಪ್ರದೇಶದಲ್ಲಿ ಗುಡ್ಡದ ಮೇಲೆ ವಿಮಾನ ನಿಲ್ದಾಣವಿದ್ದು, ಸಮುದ್ರ ಮಟ್ಟದಿಂದ 4500 ಅಡಿ ಹಾಗೂ ಪೇಕಾಂಗ್ ಗ್ರಾಮದಿಂದ 2 ಕಿ.ಮೀ ಎತ್ತರದ ಮೇಲೆ ಸ್ಥಾಪನೆಯಾಗಿದೆ. 1.75 ಕಿಮೀ ರನ್ ವೇ ಇದೆ. ಈವರೆಗೆ ಪಶ್ಚಿಮ ಬಂಗಾಳದ ಬಾಗ್ಡೋಗ್ರಾ ವಿಮಾನ ನಿಲ್ದಾಣ ಸಿಕ್ಕಿಂಗೆ ಸನಿಹದ ನಿಲ್ದಾಣವಾಗಿತ್ತು. 
ಸಿಕ್ಕಿನಿಂದ ಬಾಗ್ಡೋಗ್ರಾ 2014 ಕಿಮೀ ದೂರದಲ್ಲಿದೆ,. ಪೇಕಾಂಗ್ ವಿಮಾನ ನಿಲ್ದಾಣದಿಂದ ಅಕ್ಟೋಬರ್ 4ಕ್ಕೆ ಅಧಿಕೃತ ಹಾರಾಟ ಆರಂಭವಾಗಲಿದ್ದು, ದೆಹಲಿ, ಕೋಲ್ಕತಾ, ಗುವಾಹಟಿಯಿಂದ ಸ್ಪೈಸ್ ಜೆಟ್ ಸೇವೆ ಒದಗಿಸಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

SCROLL FOR NEXT