ಬಾಲಭಾಸ್ಕರ್ ಕುಟುಂಬ 
ದೇಶ

ಭೀಕರ ಅಪಘಾತ: ಖ್ಯಾತ ಗಾಯಕ ಬಾಲಭಾಸ್ಕರ್, ಪತ್ನಿ ಸ್ಥಿತಿ ಚಿಂತಾಜನಕ, ಮುದ್ದಾದ ಮಗು ದುರ್ಮರಣ!

ಖ್ಯಾತ ಸಂಗೀತ ಸಂಯೋಜಕ, ಗಾಯಕ ಬಾಲಭಾಸ್ಕರ್ ಅವರು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ...

ತಿರುವನಂತಪುರಂ: ಖ್ಯಾತ ಸಂಗೀತ ಸಂಯೋಜಕ, ಗಾಯಕ ಬಾಲಭಾಸ್ಕರ್ ಅವರು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಾಲಭಾಸ್ಕರ್ ಹಾಗೂ ಪತ್ನಿಯ ಸ್ಥಿತಿ ಚಿಂತಾಜನಕವಾಗಿದ್ದು, 2 ವರ್ಷದ ಮುದ್ದಾದ ಮಗು ದುರ್ಮರಣ ಹೊಂದಿದೆ. 
ತಿರುವನಂತಪುರಂನ ಪಳ್ಳಿಪುರಂನಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬಾಲಭಾಸ್ಕರ್ ಹಾಗೂ ಪತ್ನಿ ಲಕ್ಷ್ಮಿ ಸ್ಥಿತಿ ಗಂಭೀರವಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು 2 ವರ್ಷದ ಮಗಳು ತೇಜಸ್ವಿನಿ ಸ್ಥಳದಲ್ಲೇ ಮೃತಪಟ್ಟಿದೆ. 
ತ್ರಿಸೂರ್ ನಲ್ಲಿನ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂದಿರುಗುವಾಗ ಅಪಘಾತ ಸಂಭವಿಸಿದೆ ಎಂದು ಮಂಗಳಪುರಂ ಠಾಣೆ ಪೊಲೀಸರು ತಿಳಿಸಿದ್ದಾರೆ. 
ಬಾಲಭಾಸ್ಕರ್ 12 ವರ್ಷದ ಬಾಲಕನಿಂದಲು ವೇದಿಕೆಗಳ ಮೇಲೆ ಹಾಡುತ್ತಿದ್ದರು. ಇನ್ನು 17 ವರ್ಷಕ್ಕೆ ಮಲಯಾಳಂನ ಮಾಂಗಲ್ಯ ಪಲ್ಲಕ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು ಅತೀ ಚಿಕ್ಕ ವಯಸ್ಸಿಗೆ ಸಂಗೀತ ಸಂಯೋಜಿಸಿದ ಖ್ಯಾತಿಗೆ ಅವರು ಭಾಜನರಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

SCROLL FOR NEXT