ಪ್ರಧಾನಿ ಮೋದಿಯಿಂದ ನೌಕಾಪಡೆ ಅಧಿಕಾರಿ ಅಭಿಲಾಷ್ ಟಾಮಿ ಆರೋಗ್ಯ ವಿಚಾರಣೆ
: ಗೋಲ್ಡನ್ ಗ್ಲೋಬ್ ರೇಸ್ ನಲ್ಲಿ ಭಾಗಿಯಾಗಿದ್ದ ನೌಕಾಪಡೆಯ ಅಧಿಕಾರಿ ಅಭಿಲಾಷ್ ಟಾಮಿ ಆರೋಗ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾಹಿತಿ ಪಡೆದಿದ್ದಾರೆ,..
ನವದೆಹಲಿ: ಗೋಲ್ಡನ್ ಗ್ಲೋಬ್ ರೇಸ್ ನಲ್ಲಿ ಭಾಗಿಯಾಗಿದ್ದ ನೌಕಾಪಡೆಯ ಅಧಿಕಾರಿ ಅಭಿಲಾಷ್ ಟಾಮಿ ಆರೋಗ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾಹಿತಿ ಪಡೆದಿದ್ದಾರೆ,
ಈ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ, ನೌಕಾಪಡೆಯ ಅಧಿಕಾರಿ ಅಭಿಲಾಷ್ ಶೀಘ್ರವೇ ಗುಣಮುಖರಾಗಲೆಂದು ಪ್ರಾರ್ಥಿಸಿದ್ದಾರೆ.
ಅಭಿಲಾಷ್ ಟಾಮಿ ಅವರ ಜೊತೆ ಮಾತನಾಡಿದ್ದೇನೆ, ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ, ಅವರ ಶೀಘ್ರ ಚೇತರಿಕೆಗಾಗಿ ಪ್ರತಿಯೊಬ್ಬ ಭಾರತೀಯನು ಪ್ರಾರ್ಥಿಸಬೇಕು, ಅವರ ರಕ್ಷಣೆ ಮಾಡಿದ ತಂಡಕ್ಕೂ ನನ್ನ ಅಭಿನಂದನೆಗಳು, ಅಭಿಲಾಷ್ ಜೊತೆಗೆ ಸಭೆ ನಡೆಸಿದ್ದು ನನ್ನ ಮನಸ್ಸಿನಲ್ಲಿದೆ ಎಂದು ಬರೆದಿದ್ದಾರೆ.
ರೌಂಡ್ ದ ವರ್ಲ್ಡ್ ಸೋಲೊ ರೇಸ್ನಲ್ಲಿ ಪಾಲ್ಗೊಂಡಿದ್ದ ಭಾರತೀಯ ನೌಕಾಪಡೆಯ ಅಧಿಕಾರಿ ಅಭಿಲಾಷ್ ಟಾಮಿ ಅವರನ್ನು ಸೋಮವಾರ ರಕ್ಷಿಸಲಾಗಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.