ದೇಶ

ಜೆಟ್ ಏರ್‌ವೇಸ್ ಆರ್ಥಿಕ ಬಿಕ್ಕಟ್ಟು: ತುರ್ತು ಸಭೆ ಕರೆದ ಪ್ರಧಾನಿ ಕಚೇರಿ

Lingaraj Badiger
ನವದೆಹಲಿ: ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಜೆಟ್ ಏರ್‌ವೇಸ್ ವಿಮಾನಯಾನ ಸಂಸ್ಥೆಯ ಬಿಕ್ಕಟ್ಟು ಪರಿಹರಿಸಲು ಪ್ರಧಾನಿ ಕಚೇರಿ ಶುಕ್ರವಾರ ತುರ್ತು ಸಭೆ ಕರೆದಿದೆ.
ಮೂಲಗಳ ಪ್ರಕಾರ, ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರು ಸಭೆ ಕರೆದು ಪರಿಸ್ಥಿತಿ ಪರೀಶಿಲಿಸುವಂತೆ ಮನವಿ ಮಾಡಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನಿ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. 
ಜೆಟ್ ಏರ್ ವೇಸ್ ಸಮಸ್ಯೆಯನ್ನು ಶೀಘ್ರ ಬಗೆಹರಿಸಿ, ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯನ್ನು ಕಡಿಮೆ ಮಾಡಿ ಎಂದು ಸುರೇಶ್ ಪ್ರಭು ಅವರು ನಾಗರಿಕ ವಿಮಾನಯಾನ ಕಾರ್ಯದರ್ಶಿಗೆ ನಿರ್ದೇಶಿಸಿ ಟ್ವೀಟ್ ಮಾಡಿದ ನಂತರ ಈ ತುರ್ತು ಸಭೆ ಆಯೋಜಿಸಲಾಗಿದೆ.
ಈಗಾಗಲೇ ತನ್ನೆಲ್ಲ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿನ ಹಾರಾಟವನ್ನು ಸ್ಥಗಿತಗೊಳಿಸಿರುವ ಜೆಟ್ ಏರ್ ವೇಸ್, ಕೇವಲ 10 ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿವೆ.
SCROLL FOR NEXT