ಇದೊಂದು ಸಿನಿಮಾದ ಕಥೆಯ ರೀತಿ ಇದೆ. ಮಹಾರಾಷ್ಟ್ರದ ಕಲ್ಯಾಣ ಮೂಲದ ವೈದ್ಯ ದಂಪತಿಯಾದ ನಿತಿನ್ ಮತ್ತು ನೀತಾ ಝಬಕ್ ಆಸ್ಟ್ರೇಲಿಯಾಗೆ ರಜೆ ಮೇಲೆ ಹೋಗಿದ್ದರು. ಈ ಸಂದರ್ಭದಲ್ಲಿ ತಾವು ಅಪರಿಚಿತರೊಬ್ಬರ ಜೀವವನ್ನು ಉಳಿಸುತ್ತೇವೆಂದು ಕನಸು-ಮನಸಿನಲ್ಲಿ ಕೂಡ ಎಣಿಸಿರಲಿಲ್ಲ.
ಆಸ್ಟ್ರೇಲಿಯಾ ಪ್ರವಾಸದ ಕೊನೆಯಲ್ಲಿರುವಾಗ ಆಸ್ಟ್ರೇಲಿಯಾದಿಂದ ಸಿಂಗಾಪುರಕ್ಕೆ ತೆರಳಲು ಪರ್ತ್ ನಿಂದ ವಿಮಾನ ಹಿಡಿದರು.
ವಿಮಾನ ಟೇಕ್ ಆಫ್ ಆಗಿ ಇನ್ನೂ ಅರ್ಧ ತಾಸು ಆಗಿರಲಿಲ್ಲ. ವಿಮಾನದಲ್ಲಿನ ಅಟೆಂಡರ್ ವಿಮಾನದಲ್ಲಿ ಯಾರಾದರೂ ವೈದ್ಯರಿದ್ದಾರೆಯೇ ಸಹಾಯ ಬೇಕಾಗಿತ್ತು ಎಂದು ಅನೌನ್ಸ್ ಮೆಂಟ್ ಮಾಡಿದರು. 63 ವರ್ಷದ ಆಫ್ರಿಕಾ ಮಹಿಳೆ ಆನ್ನಿ ತಲೆಸುತ್ತಿ ಪ್ರಜ್ಞೆ ತಪ್ಪಿ ಬಿದ್ದಿದ್ದರು, ಮೈಯೆಲ್ಲಾ ಬೆವತು ಹೋಗಿತ್ತು.
ಈ ಸಂದರ್ಭದಲ್ಲಿ ನೆರವಿಗೆ ಬಂದವರೇ ನೀತಾ ಮತ್ತು ನಿತಿನ್ ವೈದ್ಯ ದಂಪತಿ. ವಿಮಾನದಲ್ಲಿ ಸಿಗುವ ತುರ್ತು ಕಿಟ್ ನ್ನು ಬಳಸಿ ಮಹಿಳೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು. ನೀತಾ ಅವರು ಒದಗಿಸಿದ ಸಿಪಿಆರ್ ಆನ್ನಿಯವರಿಗೆ ಮತ್ತೆ ಪ್ರಜ್ಞೆ ಬಂತು. ಆದರೂ ಅವರ ನಾಡಿ ದುರ್ಬಲವಾಗಿತ್ತು. ಹೀಗಾಗಿ ವೃದ್ಧೆಯ ತೋಳಿಗೆ ಐವಿ ಲೈನ್ ನೀಡಿದರು. ಮೊಬೈಲ್ ಫೋನ್ ನ ಟಾರ್ಚ್ ಲೈಟ್ ನ ಸಹಾಯದಿಂದ ಡಾ ನೀತಾ ಚಿಕಿತ್ಸೆ ನೀಡಿದ್ದರು.
ಆನ್ನಿಯವರ ದೈಹಿಕ ಆರೋಗ್ಯದ ಬಗ್ಗೆ, ಹಿಂದಿನ ಔಷಧಗಳ ಬಗ್ಗೆ ಈ ವೈದ್ಯ ದಂಪತಿಗೆ ಗೊತ್ತಿಲ್ಲದಿದ್ದರೂ ಕೂಡ ಆಗ ಸ್ಥಳದಲ್ಲಿ ಸಿಕ್ಕ ಕೆಲವು ವೈದ್ಯಕೀಯ ಸೌಲಭ್ಯಗಳಿಂದ ತಮ್ಮ ಕೈಲಾದ ಪ್ರಯತ್ನ ನಡೆಸಿದರು. ಆನ್ನಿಯ ನಾಡಿಮಿಡಿತವನ್ನು ಗಮನಿಸುತ್ತಾ ವಿಮಾನ ತಂಗುವವರೆಗೆ ನೋಡಿಕೊಂಡರು.
ಸಿಂಗಾಪುರದಲ್ಲಿ ಚಾಂಗಿ ವಿಮಾನ ನಿಲ್ದಾಣಕ್ಕೆ ತಲುಪುವವರೆಗೆ ವೈದ್ಯಕೀಯ ತಂಡ ಆನ್ನಿಯವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆ ನಡೆಸಿದಾಗ ಆಮ್ಲಜಲಕದ ಕೊರತೆಯ ಹೈಪೊಕ್ಸಿಯಾ ಎಂಬ ತೊಂದರೆ ಕಂಡುಬಂತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos