ದೇಶ

ಅಪೋಲೋ ಆಸ್ಪತ್ರೆಯಲ್ಲಿ ಜಯಲಲಿತಾ ಸಾವು: ತನಿಖಾ ಆಯೋಗದ ವಿಚಾರಣೆಗೆ ಸುಪ್ರೀಂ ತಡೆ

Raghavendra Adiga
ನವದೆಹಲಿ: ತಮಿಳು ನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಸಾವಿನ ಕುರಿತಂತೆ ತನಿಖಾ ಆಯೋಗ ನಡೆಸುತ್ತಿದ್ದ ತನಿಖೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.
ಜಯಲಲಿತಾ ಅವರು 2016 ಡಿಸೆಂಬರ್ 5ರಂದು ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಆಸ್ಪತ್ರೆಯಲ್ಲಿ ಎಐಎಡಿಎಂಕೆ ಅಧಿನಾಯಕಿಯ ಸಾವಿನ ಕುರಿತು  ನಡೆಯುತ್ತಿರುವ ವಿಚಾರಣೆಯನ್ನು ನಿಲ್ಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿ  ಎಪ್ರಿಲ್ 4ರಂದು ಆದೇಶ ನಿಡಿತ್ತು. ಇದನ್ನು ಪ್ರಶ್ನಿಸಿ ಅಪೋಲೋ ಆಸ್ಪತ್ರೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ನೇತೃತ್ವದ ಪೀಠವು ಇಂದು ಆಸ್ಪತ್ರೆಯ ಮನವಿಯನ್ನು ಆಲಿಸಿದೆ.
"ಮುಂದಿನ ಆದೇಶದವರೀಗೆ ತನಿಖಾ ಆಯೋಗದ ವಿಚಾರಣೆಗೆ ತಡೆ ನಿಡಲಾಗಿದೆ" ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ಪೀಠ ನಿರ್ದೇಶಿಸಿದೆ.
ಎಐಎಡಿಎಂಕೆ ನೇತೃತ್ವದ ರಾಜ್ಯ ಸರ್ಕಾರ ತಮ್ಮ ಪಕ್ಷದ ಅಧಿನಾಯಕಿ ಜಯಲಲಿತಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಹಿನ್ನೆಲೆಯನ್ನು ಅರಿಯಲು ತನಿಕಾ ಆಯೋಗವನ್ನು ರಚಿಸಿದೆ..
SCROLL FOR NEXT