ಶ್ರೀನಗರ: ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸುವ ಸಂವಿಧಾನದ 370ನೇ ವಿಧಿ ರದ್ಧತಿ ಬಗ್ಗೆ ದೇಶದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
1980ರ ನಂತರ ಹಾಗೂ 1990ಕ್ಕೂ ಮುಂಚೆ ಜಮ್ಮ ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ ಹಾಗೂ ಇಸ್ಲಾಮಿಕ್ ಸಂಘಟನೆಗಳಿಂದ ದಾಳಿಗೆ ಒಳಗಾಗಿ ಆ ಪ್ರದೇಶದಿಂದ ಹೊರ ಹೋಗುವಂತೆ ಬಲವಂತಪಡಿಸಲಾಗುತ್ತಿದ್ದ ನಿರಾಶಿತ್ರರು ಎಂದು ಪರಿಗಣಿಸಲಾಗಿದ್ದ ಕಾಶ್ಮೀರ ಪಂಡಿತರು ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಮುಸ್ಲಿಂ ರಾಷ್ಟ್ರದ ನೆರೆ ಹೊಂದಿದ್ದರೂ ಜಮ್ಮು- ಕಾಶ್ಮೀರ, ದೆಹಲಿ ಮತ್ತಿತರ ಕಡೆಗಳಲ್ಲಿ ಈ ಅಲ್ಪಸಂಖ್ಯಾತ ಸಮುದಾಯ ಶಾಂತಿಯುತವಾಗಿ ವಾಸಿಸುತ್ತಿದೆ. 370 ನೇ ವಿಧಿ ರದ್ದತಿ ಕ್ರಮವನ್ನು ಕಾಶ್ಮೀರ ಪಂಡಿತ ಸಮುದಾಯದ 23 ವರ್ಷದ ಪತ್ರಕರ್ತೆ ಪ್ರಿಯಾಂಕಾ ಕೌಲ್ ಸ್ವಾಗತಿಸಿದ್ದು, ಈ ನಿರ್ಧಾರದಿಂದ ಕಾಶ್ಮೀರಿ ಪಂಡಿತರು ಖುಷಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಜಮ್ಮುವಿನಲ್ಲಿ ಅನೇಕ ಸಂಬಂಧಿಕರು ಇದ್ದರೂ ಜಮ್ಮು- ಕಾಶ್ಮೀರವನ್ನು ನಮ್ಮದು ಎಂದು ಹೇಳಿಕೊಳ್ಳುವ ಸ್ಥಿತಿಯಲಿಲ್ಲ, ಆದರೆ, ಕಾಶ್ಮೀರದಿಂದ ಬಂದವರು ಎಂದು ಹೇಳಿಕೊಳ್ಳದೆ ಇರಲಾಗದು ಎನ್ನುತ್ತಾರೆ.
ಶ್ರೀನಗರದಿಂದ ಬಂದು ಪುಣೆಯಲ್ಲಿ ನಾಲ್ಕನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ನಿಖಿಲ್ ಶಾಲ್ಲಾ ಮಾತನಾಡಿ, ಕೇಂದ್ರ ಸರ್ಕಾರದಿಂದ ನಿರ್ಧಾರದಿಂದ ಅಲ್ಲಿರುವ ಜನರು ಅಭಿವೃದ್ಧಿಯಾಗಲಿದೆ. ನಿರ್ಲಕ್ಷ್ಯಕ್ಕೊಳಗಾಗಿದ್ದ ಲಡಾಖ್ ಪ್ರದೇಶವನ್ನು ವಿಭಜನೆ ಮಾಡಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದದ್ದು ಉತ್ತಮ ಹೆಜ್ಜೆ ಎಂದಿದ್ದಾರೆ.
ಜಮ್ಮು- ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿ ಕೇಂದ್ರಸರ್ಕಾರದಿಂದ ಆಡಳಿತ ನಡೆಯುವುದರಿಂದ ಸೂಕ್ತ ಗಡಿ ಭದ್ರತೆ, ಭ್ರಷ್ಟಾಚಾರ ಕ್ಷೀಣಿಸಲಿದ್ದು, ಹಣ ಒಳ್ಳೇಯ ಕೆಲಸಗಳಿಗೆ ಬಳಕೆಯಾಗಲಿದೆ , ಕೇಂದ್ರಾಡಳಿತ ಪ್ರದೇಶದಿಂದ ಉಗ್ರಗಾಮಿ ಸಮಸ್ಯೆ ತಪ್ಪಲಿದೆ ಎಂದು ಶ್ರೀನಗರದಿಂದ ಬಂದು ಮುಂಬೈನಲ್ಲಿ ನೆಲೆಸಿರುವ ಎಂಜಿನಿಯರಿಂಗ್ ವಿದ್ಯಾರ್ಥಿ ತಾನಿಜಾ ರಾಜ್ದಾನ್ ಹೇಳುತ್ತಾರೆ.
ಉತ್ತಮ ಭವಿಷ್ಯದ ಬಗ್ಗೆ ಭರವಸೆ ಹೊಂದಿರುವುದಾಗಿ ಹೈದ್ರಾಬಾದಿನಲ್ಲಿರುವ ಐಟಿ ಉದ್ಯೋಗಿ ರಿತಿಕ್ ರಜ್ದಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೂಡಲೇ ನಮ್ಮ ಕುಟುಂಬ ಪ್ರಯೋಜನ ಪಡೆದುಕೊಳ್ಳದಿದ್ದರೂ ಮುಂದೆ ಲಾಭ ಪಡೆದುಕೊಳ್ಳುವ ಭರವಸೆ ಹೊಂದಿರುವುದಾಗಿ ಹೇಳುತ್ತಾರೆ.