ಸಂಗ್ರಹ ಚಿತ್ರ 
ದೇಶ

ಕಾಶ್ಮೀರಿ ಯುವತಿಯರ ಕುರಿತು ಹೇಳಿಕೆ; 'ಹೇಳಿಕೆ ತಿರುಚಬೇಡಿ' ಎಂದು ರಾಹುಲ್ ಗಾಂಧಿ ಕಾಲೆಳೆದ ಹರ್ಯಾಣ ಸಿಎಂ ಖಟ್ಟರ್

ಕಾಶ್ಮೀರಿ ಯುವತಿಯರ ಕುರಿತ ತಮ್ಮ ಹೇಳಿಕೆಯನ್ನು ತಿರುಚಲಾಗಿದ್ದು, ರಾಹುಲ್ ಗಾಂಧಿ ಅವರಂತಹ ದುರ್ಬಲ, ಅಸುರಕ್ಷಿತ ಮತ್ತು ಕರುಣಾಜನಕ ಮನಸ್ಥಿತಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಹೇಳಿಕೆ ತಿರುಚಿದ್ದಾರೆ ಎಂದು ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.

ನವದೆಹಲಿ: ಕಾಶ್ಮೀರಿ ಯುವತಿಯರ ಕುರಿತ ತಮ್ಮ ಹೇಳಿಕೆಯನ್ನು ತಿರುಚಲಾಗಿದ್ದು, ರಾಹುಲ್ ಗಾಂಧಿ ಅವರಂತಹ ದುರ್ಬಲ, ಅಸುರಕ್ಷಿತ ಮತ್ತು ಕರುಣಾಜನಕ ಮನಸ್ಥಿತಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಹೇಳಿಕೆ ತಿರುಚಿದ್ದಾರೆ ಎಂದು ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಹರ್ಯಾಣ ಸಿಎಂ ಖಟ್ಟರ್,  ರಾಹುಲ್ ಗಾಂಧಿ ಅವರಂತಹ ದುರ್ಬಲ, ಅಸುರಕ್ಷಿತ ಮತ್ತು ಕರುಣಾಜನಕ ಮನಸ್ಥಿತಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಹೇಳಿಕೆ ತಿರುಚಿದ್ದಾರೆ. ಕಾಶ್ಮೀರ ವಿಚಾರವಾಗಿ ಸುದೀರ್ಘ ಕಾಲದವರೆಗೂ ಕೆಲಸ ಮಾಡದೇ ಈಗ ತಿರುಚಿದ ಹೇಳಿಕೆಗಳ ಮೂಲಕ ತಮ್ಮದೇ ಪಕ್ಷದ ವರ್ಚಸ್ಸನ್ನು ದುರ್ಬಳಗೊಳಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಫತೇಹಾಬಾದ್ ನಲ್ಲಿ ಶುಕ್ರವಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿರುವ ಕಾರಣ ಕಾಶ್ಮೀರಿ ಮಹಿಳೆಯರನ್ನು ವಿವಾಹಗಳ ಮೂಲಕ ರಾಜ್ಯಕ್ಕೆ ಕರೆತರಬಹುದು ಎಂದು ಹೇಳಿದ್ದರು. ಹರಿಯಾಣದಲ್ಲಿ ಹೆಣ್ಣು ಭ್ರೂಣ ಹತ್ಯೆ ಹಾಗೂ ಹೆಣ್ಣು - ಗಂಡು ಮಕ್ಕಳ ಲಿಂಗಾನುಪಾತ ವ್ಯತ್ಯಾಸಕ್ಕೆ ಕುಖ್ಯಾತವಾಗಿದ್ದು, “ಬೇಟಿ ಪಡಾವೊ ಬೇಟಿ ಬಚಾವೊ” ಯೋಜನೆ ಆರಂಭಿಸಿದ ನಂತರ ಲಿಂಗಾನುಪಾತವನ್ನು 850 ರಿಂದ 933ಕ್ಕೆ ಹೆಚ್ಚಿಸಲಾಗಿದೆ. ಇದೊಂದು ಅತಿದೊಡ್ಡ ಸಾಮಾಜಿಕ ಬದಲಾವಣೆ, ಯಾರೊಬ್ಬರೂ ಬೇಕಾದರೂ ಲಿಂಗಾನುಪಾತ ಭವಿಷ್ಯದಲ್ಲಿ ಸೃಷ್ಟಿಸಲಿರುವ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬಹುದು.. ಪರಿಸ್ಥಿತಿ ಇದೇರೀತಿ ಮುಂದುವರಿದಿದ್ದರೆ, ಮಹಿಳೆಯರ ಸಂಖ್ಯೆ ಇಳಿಕೆಯಾಗಿ ಪುರುಷರ ಸಂಖ್ಯೆ ಏರಿಕೆಯಾಗುತ್ತಿತ್ತು ಎಂದು ಖಟ್ಟರ್ ಹೇಳಿದ್ದರು.

ನಮ್ಮ ಸಂಪುಟದ ಮಂತ್ರಿ ಓ.ಪಿ. ಧನಕರ್, ಬಿಹಾರದಿಂದ ಸೊಸೆಯರನ್ನು ತರಬೇಕಿದೆ ಎಂದು ಹೇಳಿದ್ದರು. ಈಗ ಕಾಶ್ಮೀರವೂ ಮುಕ್ತಗೊಂಡಿದೆ. ನಾವು ಕಾಶ್ಮೀರದಿಂದಲೂ ಹೆಣ್ಣುಗಳನ್ನು ತರಬಹುದು ಎಂದು ಈಗ ಕೆಲವರು ಜೋಕ್ ಮಾಡುತ್ತಿದ್ದಾರೆ ಎಂದು ಖಟ್ಟರ್ ಹೇಳಿದ್ದರು. ಹೆಣ್ಣು ಗಂಡು ಲಿಂಗಾನುಪಾತ ಸೂಕ್ತವಾಗಿದ್ದರೆ ಸಮಾಜ ಸಮತೋಲಿತವಾಗಿರಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದರು. ಈ ವಿಚಾರವಾಗಿ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಕಾಶ್ಮೀರ ಮಹಿಳೆಯರ ಬಗ್ಗೆ ಹರಿಯಾಣ ಮುಖ್ಯಮಂತ್ರಿ ಖಟ್ಟರ್ ತುಚ್ಚವಾಗಿ ಮಾತನಾಡಿದ್ದಾರೆ. ಖಟ್ಟರ್ ಅವರಿಗೆ ಇಷ್ಟು ವರ್ಷಗಳ ಕಾಲ ಆರ್ ಎಸ್ ಎಸ್ ನೀಡಿದ್ದ ತರಬೇತಿ ಏನು ಎಂಬುದು ಈ ಮಾತುಗಳಿಂದ ಗೊತ್ತಾಗುತ್ತಿದೆ. ಪುರುಷರು ಮಾಲೀಕತ್ವ ಹೊಂದಲು ಮಹಿಳೆಯರು ಆಸ್ತಿಗಳಲ್ಲ ಅವರ ಮನುಷ್ಯ ಜೀವಿಗಳು ಎಂದು ಟ್ವೀಟ್ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್