ದೇಶ

ವಾಘಾ ಗಡಿಯಲ್ಲಿ ಬಿಎಸ್ ಎಫ್ ಯೋಧರಿಗೆ ರಾಕಿ ಕಟ್ಟಿ ರಕ್ಷಾ ಬಂಧನ್ ಆಚರಿಸಿದ ಮಹಿಳೆಯರು

ಅಟ್ಟಾರಿ- ವಾಘಾ ಗಡಿ ಪ್ರದೇಶದಲ್ಲಿ ಬಿಎಸ್ ಎಫ್ ಯೋಧರಿಗೆ ಮಹಿಳೆಯರು ರಾಕಿ ಕಟ್ಟುವ ಮೂಲಕ ರಕ್ಷಾ ಬಂಧನ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದ್ದಾರೆ.

ಪಂಜಾಬ್ : ಅಟ್ಟಾರಿ- ವಾಘಾ ಗಡಿ ಪ್ರದೇಶದಲ್ಲಿ ಬಿಎಸ್ ಎಫ್ ಯೋಧರಿಗೆ ಮಹಿಳೆಯರು ರಾಕಿ ಕಟ್ಟುವ ಮೂಲಕ ರಕ್ಷಾ ಬಂಧನ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದ್ದಾರೆ.

ದೇಶದ ವಿವಿಧ ಕಡೆಗಳಿಂದ ವಾಘಾ ಗಡಿಗೆ ಆಗಮಿಸಿದ ಮಹಿಳೆಯರು ಭದ್ರತಾ ಪಡೆಗಳಿಗೆ ರಾಕಿ ಕಟ್ಟುವ ಮೂಲಕ ರಕ್ಷಾ ಬಂಧನ್ ಹಬ್ಬದ ಶುಭಾಶಯ ಕೋರಿದರು.

ಗಡಿ ಭಾಗದಲ್ಲಿ ರಕ್ಷಾ ಬಂಧನ್ ಆಚರಿಸುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದು ಪುಣೆಯಿಂದ ಬಂದಿದ್ದ ಯುವತಿಯೊಬ್ಬರು ತಿಳಿಸಿದರು. ದೇಶಕ್ಕಾಗಿ ಹಗಲಿರುಳು ಸೇವೆ ಸಲ್ಲಿಸುವ ಯೋಧರಿಗೆ ಧನ್ಯವಾದ ಹೇಳುವುದಾಗಿ ಅವರು ತಿಳಿಸಿದರು.

ಮಹಿಳೆಯರಿಂದ ರಾಕಿ ಕಟ್ಟಿಸಿಕೊಂಡ ಯೋಧರು ಸಹ ಪ್ರತಿಯಾಗಿ ಸಿಹಿ ನೀಡುವ ಮೂಲಕ ಮಹಿಳೆಯರಿಗೆ ಶುಭ ಕೋರಿದರು. 

ದೇಶಾದ್ಯಂತ ಇಂದು 73 ನೇ ಸ್ವಾತಂತ್ರ್ಯೋತ್ಸವ ಹಾಗೂ ರಕ್ಷಾ ಬಂಧನ್ ಹಬ್ಬವನ್ನು ಸಡಗರ ,ಸಂಭ್ರಮದಿಂದ ಆಚರಿಸಲಾಗುತ್ತಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

ವಿದೇಶಿ ಮಹಿಳೆಗೆ ಪತ್ರ ಬರೆದು ಅಂಬೇಡ್ಕರ್ ಸೋಲನ್ನು ನೆಹರು ಸಂಭ್ರಮಿಸಿದ್ದು ನಿಜವಲ್ಲವೇ? 'ಗೂಗಲ್ ಬೇಬಿ'ಯಂತೆ ವರ್ತಿಸಬೇಡಿ!

SCROLL FOR NEXT