ದೇಶ

ಸಾಯುವ ಮುನ್ನ ತರೂರ್ ಪತ್ನಿ ಮಾನಸಿಕವಾಗಿ ನೊಂದಿದ್ದರು: ಸುನಂದಾ ಪುಷ್ಕರ್ ವಕೀಲರ ವಾದ

Raghavendra Adiga

ನವದೆಹಲಿ: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ತಾನು ಸಾವನ್ನಪ್ಪುವ ಮುನ್ನ ಮಾನಸಿಕ ಸಂಕಟದಿಂದ ಬಳಲುತ್ತಿದ್ದಳು ಎಂದು ಪುಷ್ಕರ್ ಪರ ವಕೀಲರು ಹೇಳಿದ್ದಾರೆ. ತರೂರ್ ಜತೆಗಿನ ಜಗಳದ ತರುವಾಯ ಆಕೆ ಮಾನಸಿಕವಾಗಿ ನೊಂದಿದ್ದಳೆಂದು  ಅವರು ವಾದಿಸಿದ್ದಾರೆ.

ಮರಣೋತ್ತರ ವರದಿಯನ್ನು ಉಲ್ಲೇಖಿಸಿ, ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ಅವರು ಸಿಬಿಐ ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಅವರ ಮುಂದೆ ವಾದ ಮಂಡಿಸಿದ್ದಾರೆ. ಅಲ್ಲದೆ ಪುಷ್ಕರ್ ಅವರ ಮೃತದೇಹದ ಹಲವು ಕಡೆ ಗಾಯಗಳ ಗುರುತಿದ್ದು ಅವು ಸುಮಾರು ನಾಲ್ಕು ದಿನ 12 ಗಂಟೆಗಳಷ್ಟು ಹಳೆಯದು ಎಂದು ಅವರು ಉಲ್ಲೇಖಿಸಿದ್ದಾರೆ.

ವಕೀಲರು ಪುಷ್ಕರ್ ಸ್ನೇಹಿತೆ ನಳಿನಿಯವರ ಹೇಳಿಕೆ ಓದಿದ್ದಾರೆ.ಅದರಲ್ಲಿ ತರೂರ್ ಅವರಿಗೆ ತರಾರ್ ಎಂಬ ಮಹಿಳೆಯೊಂದಿಗೆ  ಸಂಬಂಧವಿದೆ ಎಂದು ವಿವರಿಸಲಾಗಿದೆ.

"ನನಗೆ ಪುಷ್ಕರ್ ಅವರಿಂದ ಕರೆ ಬಂದಿತ್ತು. ಅವರು ತನ್ನ ಪತಿ ತರೂರ್ ತರಾರ್ ಎಂಭಾಕೆಯೊಂದಿಗೆ ಹಂಚಿಕೊಂಡ ಕೆಲವು ಸಂದೇಶವನ್ನು ಕಂಡುಕೊಂಡಿದ್ದರು. ಅಲ್ಲದೆ ತರಾರ್ ಶಶಿ ತರೂರ್ ಅವರಿಗೆ ಬರೆದ ಇ-ಮೇಲ್ ಸಹ ಇದ್ದು ಅದರಲ್ಲಿ ಆಕೆ ತರೂರ್ ಅವರನ್ನು "ಮೈ ಡಾರ್ಲಿಂಗ್" ಎಂದು ಸಂಬೋಧಿಸಿದ್ದಾಳೆ." ನಳಿನಿ ಹೇಳಿಕೆಯಲ್ಲಿ ವಿವರಿಸಿದೆ.

ಆದಾಗ್ಯೂ, ತರೂರ್ ಪರವಾಗಿ ಹಾಜರಾದ ವಕೀಲ ವಿಕಾಸ್ ಪಹ್ವಾ ಈ ಆರೋಪವನ್ನು ನಿರಾಕರಿಸಿದ್ದಾರೆ. ಎರಡೂ ಕಡೆಯವರು ಮಂಡಿಸಿದ ವಾದ ಆಲಿಸಿದ ಬಳಿಕ ನ್ಯಾಯಾಧೀಶ ಕುಮಾರ್ ವಿಚಾರಣೆಯನ್ನು ಆ.31ಕ್ಕೆ ಮುಂದೂಡಿ ಆದೇಶಿಸಿದರು.ಅಷ್ಟರಲ್ಲಿ ಎಲ್ಲಾ ಸಂಬಂಧಿತ ದಾಖಲೆಗಳನ್ನು ಒಟ್ಟುಗೂಡಿಸಲು ಸಿಕ್ಯೂಷನ್‌ಗೆ ನಿರ್ದೇಶಿಸಿದರು.

ಜನವರಿ 17, 2014 ರ ರಾತ್ರಿ ಪುಷ್ಕರ್ ಅವರು ದೆಹಲಿಯ ಐಷಾರಾಮಿ ಹೋಟೆಲ್‌ನ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಕೆಯ ಹತ್ಯೆಯ ನಂತರ, ತರೂರ್ ವಿರುದ್ಧ ಭಾರತೀಯ ದಂಡ ಸಂಹಿತೆಯ 498-ಎ (ಪತಿ ಅಥವಾ ಅವನ ಸಂಬಂಧಿ ಮಹಿಳೆಯನ್ನು ಕ್ರೌರ್ಯಕ್ಕೆ ಒಳಪಡಿಸುವ ಪ್ರಕರಣ) ಸೆಕ್ಷನ್ 306 (ಆತ್ಮಹತ್ಯೆಗಾಗಿ ಅಪರಾಧ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT